ಚಳ್ಳಕೆರೆ ನ್ಯೂಸ್ :
ಬೆಳ್ಳಿ ಹಬ್ಬದಲ್ಲಿ ಉತ್ತರಾಧಿಕಾರಿ ಹುಡುಕಾಟ
ನಡೆಯುತ್ತದೆ
ರಾಷ್ಟ್ರ ಮಟ್ಟದ ಛಲವಾದಿ ಸಮುದಾಯದವತಿಯಿಂದ ಶ್ರೀಗಳ
ಪೀಠರೋಹಣದ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವವನ್ನು
ಆಚರಿಸುತ್ತಿದ್ದು, ಇಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ನಮ್ಮ
ಸಮುದಾಯದ 12 ರಿಂದ 13 ವರ್ಷದಿಂದ
ಹುಡುಕುತ್ತಿದ್ದೇವೆ ಎಂದು ರಾಜ್ಯ ಛಲವಾದಿ ಮಹಾಸಭಾದ
ಉಪಾಧ್ಯಕ್ಷ ಮಂಜುನಾಥ್ ಹೇಳಿದರು.
ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು. ಯಾವುದೇ ಮೂಲೆಯಿಂದ
ವಟು ಬಂದರೆ ಅವರ ಸಂಪೂರ್ಣ ಖರ್ಚು ವೆಚ್ಚವನ್ನು ಮಠದ
ಪೀಠವೆ ಭರಿಸಿ, ಉನ್ನತ ಶಿಕ್ಷಣ ಸಿಗುವಂತೆ ಮಾಡಲಾಗುತ್ತದೆಂದರು.