ಚಳ್ಳಕೆರೆ ನ್ಯೂಸ್ : 2024 ರ
ಲೋಕಸಭಾ ಚುನಾವಣೆ ನೀತಿ ಸಂಹಿತೆ ಇಂದಿನಿಂದ
ಜಾರಿಯಾಗುತ್ತಿದ್ದಂತೆ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳು ಹಾಗೂ ಇನ್ನಿತರ ರಾಜಕೀಯ ಪ್ರೇರಿತವಾದ ಪ್ಲೆಕ್ಸ್ ಬ್ಯಾನರ್ ಗಳು, ಗೋಡೆ ಬರಹಗಳನ್ನು ಸಿಬ್ಬಂದಿಯಿಂದ ಮುಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಬ್ಯಾನರ್,
ಪ್ಲೆಕ್ಸ್, ಪೋಸ್ಟರ್ ತೆರವು ಹಾಗೂ ಅಭಿವೃದ್ಧಿ ಕಾಮಗಾರಿ ಕಟ್ಟಡಗಳ
ಮೇಲಿನ ಜನಪ್ರತಿನಿಧಿಗಳ ಹೆಸರಿನ ನಾಮಫಲಕಗಳನ್ನು ಮುಚ್ಚಲು
ಮುಂದಾಗಿದ್ದಾರೆ.
ಮಾರ್ಚ 16 ರ ಶನಿವಾರ ಮಧ್ಯಾಹ್ನದಿಂದಲೇ ಲೋಕಸಭಾ
ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ
ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ
ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು
ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಇನ್ನೂ ಚಳ್ಳಕೆರೆ ತಾಲ್ಲೂಕಿನ ಚುನಾವಣೆ ಅಧಿಕಾರಿ ಬಿ.ಆನಂದ ಹಾಗೂ ತಹಶಿಲ್ದಾರ್ ರೇಹಾನ್ ಪಾಷ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಒಂದು ಸುತ್ತಿನ ಸಭೆ ನಡೆಸಿದ್ದು ನೀತಿ ಸಂಹಿತೆ ಜಾರಿ ಬಗ್ಗೆ ಮಾಹಿತಿ ನೀಡಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದ್ದಾರೆ