ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದು
ತಾಲೂಕಿನ ಮಲ್ಲಹಳ್ಳಿ ಸರ್ವೆ ನಂಬರ್ 67 ರಲ್ಲಿ ಕಲ್ಲು ಗಣಿಗಾರಿಕೆ
ನಡೆಸಲು ಪರವಾನಗಿ ನೀಡಬಾರದು ಹಾಗೂ ಗ್ರಾಮಸ್ಥರಿಗೆ ಜೀವ
ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ
ಗ್ರಾಮಸ್ಥರು ಹಾಗೂ ನಾನಾ ಸಂಘಟನೆಗಳ ಪದಾಧಿಕಾರಿಗಳು
ಮನವಿ ಪತ್ರ ನೀಡಿದರು.
ಗ್ರಾಮಸ್ಥರ ಮೇಲೆ ಗಣಿಗಾರಿಕೆ
ಮಾಫಿಯಾದವರು ಹಲ್ಲೆ ನಡೆಸಲು ಮುಂದಾಗಿದೆ ಜೀವ ಬೆದರಿಕೆ
ಹಾಕಿ ಆನಂತರ ಪೊಲೀಸ್ ಠಾಣೆಗೆ ತೆರಳಿ ಗ್ರಾಮಸ್ಥರು ವಿರುದ್ಧ
ದೂರು ನೀಡಿದ್ದಾರೆ.
ಆದ್ದರಿಂದ ನಮಗೆ ಪೊಲೀಸ ರಕ್ಷಣೆ
ನೀಡಬೇಕು ಎಂದರು.