ಚಳ್ಳಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಯುವ ಜನತೆ ಮತದಾನ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಉಪನ್ಯಾಸಕ ರಾಘವೇಂದ್ರ ನಾಯಕ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಂಧರ್ವ ಯುವಕಲಾಸಂಘ ಓಬಣನಹಳ್ಳಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 18 ವರ್ಷ ಮೇಲ್ಪಟ್ಟ ಎಲ್ಲಾ ಪ್ರಜೆಗಳಿಗೆ ದೇಶದ ಸಂವಿಧಾನವು ಮತದಾನದ ಹಕ್ಕನ್ನು ನೀಡಿದೆ ಸಂವಿಧಾನ ನೀಡಿರುವ ಈ ಹಕ್ಕನ್ನು ಬಳಸಿ, ದೇಶಕ್ಕೆ ಉತ್ತಮ ಭವಿಷ್ಯ ಕಲ್ಪಿಸುವ ನಾಯಕರನ್ನು ಆರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಮತದಾರರ ಮೇಲಿದೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ತೋರುವ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕನ್ನು ಅರ್ಹ ವ್ಯಕ್ತಿಗೆ ಚಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲುದಾರರಾದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಮತದಾನಕ್ಕೂ ನಮಗೂ ಸಂಬಂಧವಿಲ್ಲವೆಂದು ಸೋಮಾರಿತನ ತೋರಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಂತಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲಾ ಯುವ ಮತದಾರರು ಚುನಾವಣೆಗಳಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ, ದೇಶದ ಪ್ರಜಾಪ್ರಭುತ್ವಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಹೇಮಂತ್ ರಾಜ್ ಮಾತನಾಡಿ ಮತದಾನ ಎಂಬುದು ಅಮೂಲ್ಯ ಕರ್ತವ್ಯವಾಗಿದ್ದು ಅಂದಿನ ದಿನ ಸರ್ಕಾರವೇ ರಜೆ ಘೋಷಣೆ ಮಾಡಿ ಕಡ್ಡಾಯ ಮತದಾನಕ್ಕೆ ಪ್ರೋತ್ಸಾಹಿಸುತ್ತದೆ ಯುವಜನತೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅಭಿವೃದ್ಧಿ ಕಾಣುವುದು ಶೂನ್ಯ ಹಾಗಾಗಿ ಮತದಾನ ಮಾಡುವುದು ವ್ಯರ್ಥದ ಕೆಲಸ ಎಂಬ ಮನೋಭಾವದಿಂದ ಹೊರಬಂದು ಮತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಮತವನ್ನು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಅನಕ್ಷರಸ್ಥರಿಗೆ ವಿದ್ಯಾವಂತ ಯುವಕರು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ಅಡಿಪಾಯ ಹಾಕಲು ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಂಧರ್ವ ಯುವ ಕಲಾ ಸಂಘದ ಕಾರ್ಯದರ್ಶಿಗಳಾದ ಹಿಮಂತರಾಜ.ಟಿ, ರಂಗಭಂಡಾರ ಕಲಾ ಸಂಘದ ಅಧ್ಯಕ್ಷರಾದ ನಿರ್ಮಲ,ಕಾಲೇಜಿನ  ಉಪನ್ಯಾಸಕರಾದ ಕೆ.ಬಿ.ರವಿಕುಮಾರ್, ದೊರೆಸ್ವಾಮಿ, ಕಲ್ಲೇಶ, ವಿಶ್ವನಾಥ್, ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!