ಚಳ್ಳಕೆರೆ ನ್ಯೂಸ್ : ಶ್ರೀ ಚಳ್ಳಕೆರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.16 ಜಾತ್ರೆಯ ಸಲುವಾಗಿ ಇದೇ ಮಾ.14 ರಂದು ಸಿ.ಡಿ ಉತ್ಸವ ಇರುವ ಪ್ರಯುಕ್ತ
ಚಳ್ಳಕೆರೆ ನಗರದ NH 150(A) ರಸ್ತೆಯ ಮಾರ್ಗ ಬದಲಾವಣೆ ಮಾಡಲಾಗಿದೆ ವಾಹನ ಸವಾರರು, ಸಾರ್ವಜನಿಕರು ಸಹಕರಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಳ್ಳಕೆರೆ
ನಗರದಲ್ಲಿ ಮಾ.11 ರಿಂದ 16 ರವರೆಗೆ ಶ್ರೀ ಚಳ್ಳಕೆರಮ್ಮ ದೇವಿಯ ಜಾತ್ರಾ
ಮಹೋತ್ಸವ ನಡೆಯಲಿದ್ದು, ಮಾ:14 ರಂದು ಬೆಳಿಗ್ಗೆ 11-00 ಗಂಟೆಯಿಂದ ಸಂಜೆ 7-00
ಗಂಟೆಯವರೆಗೆ ಚಳ್ಳಕೆರಮ್ಮ ದೇವಸ್ಥಾನದಿಂದ ಬಸವೇಶ್ವರ ಸರ್ಕಲ್‌ವರೆಗೆ ಸಿ.ಡಿ ಉತ್ಸವ ಮೆರವಣಿಗೆ
ನಡೆಯಲಿದ್ದು, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ
ಚಳ್ಳಕೆರೆ ನಗರದ NH 150(A) ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ಎಂದು ತಿಳಿಸಿದ್ದಾರೆ.