*
ನಾಯಕನಹಟ್ಟಿ: : ಮಾ.12. ಸಮೀಪದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳವಾರ ಗ್ರಾಮಸ್ಥರು ರಥೋತ್ಸವದ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳ ನೆರವೇರಿಸಲಾಯಿತು.
ಬೆಳಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿದ್ದರು.
ಗ್ರಾಮದ ಯಜಮಾನ ಬೋರಯ್ಯ ರವರ ಮನೆಯಿಂದ ರಥೋತ್ಸವಕ್ಕೆ ಬಲಿ ಅನ್ನ ತರಲಾಯಿತು ಕಾಸು ಮೀಸಲು ಮೊಸರು ತುಂಬಾ ಜಿನಿಗೆ ಹಾಲು ತಂದು ಶ್ರೀ ವೀರಾಂಜನೇಯ ಸ್ವಾಮಿ ರಥಕ್ಕೆ ಎಡೆ ಹಾಕಲಾಯಿತು.
ಇನ್ನೂ ರಥೋತ್ಸವಕ್ಕ ಮುನ್ನ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು.
ಮುಕ್ತಿ ಬಾವುಟವನ್ನು ಗ್ರಾಮದ ಯುವ ಮುಖಂಡ ಬಿ.ಒ. ಮಂಜುನಾಥ್ 34. ಸಾವಿರ ರೂ.ಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡಿರು.
ನಂತರ ಮಹಾ ಮಂಗಳಾರತಿ ಮಾಡಿ ಗ್ರಾಮಸ್ಥರು ರಥೋತ್ಸವಕ್ಕೆ
ಚಾಲನೆಯನ್ನು ನೀಡಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿಯನ್ನು ಸಂಪರ್ಕಿಸಿದ್ದರು.
ರಥ ಸಂಚರಿಸುವ ದಾರಿ ಯುದ್ಧಕ್ಕೂ ಭಕ್ತರು ಬಾಳೆಹಣ್ಣು ಮಂಡಕ್ಕಿ ಎರಚುತ್ತಿದ್ದರು. ರಥೋತ್ಸವದಲ್ಲಿ ಡೊಳ್ಳು ಹಾಗೂ ನಂದಿಕೋಲು ಕುಣಿತ ಗಮನ ಸೆಳೆದವು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಿನ್ನಬೋಸಯ್ಯ, ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ. ಬಿ. ಮುದಿಯಪ್ಪ. ಪಟ್ಟಣ ಪಂಚಾಯತಿ ಸದಸ್ಯ ಡಿ. ಓಬಯ್ಯ ದಾಸ್, ವೈ.ಓ ಮಂಜು (ಗೂಳಿ), ಎಸ್ ಟಿ ಬಸವರಾಜ್, ಎನ್ ಬಿ ಹಳ್ಳಿ ಮೇಷ್ಟ್ರು, ವೈ ಬಿ ಯಾರ್ರಿಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಎಸ್ ಪಿ ನಾಗರಾಜ್, ಡಿ ಬಿ ಬೋರಯ್ಯ, ಸೇರಿದಂತೆ ಬೋಸದೇವರಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು