ಚಳ್ಳಕೆರೆ

ನಾಟಕದ ವೇಳೆ ಹೃದಯಾಘಾತ ಸಂಭವಿಸಿ ವಿಲನ್ ಪಾತ್ರದಾರಿ ಸಂತೋಷ್ ಸಾವು

ಚಳ್ಳಕೆರೆ : ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಶ್ರೀ ದುರ್ಗಾಂಭಿಕಾ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ತಡರಾತ್ರಿ ಸಾಮಾಜಿಕ ನಾಟಕ ಪ್ರದರ್ಶನದ ವೇಳೆ ಖಳನಾಯಕನ ಪಾತ್ರಧಾರಿ ಸಂತೋಷ ಮೊದಲ ದೃಶ್ಯವನ್ನು ಮುಗಿಸಿ ಎರಡನೇ ದೃಶ್ಯಕ್ಕೆ ಸಿದ್ಧವಾಗುತ್ತಾ ವೇಳೆ ಹೃದಯಾಘಾತ ಸಂಭವಿಸಿ ಸಾವನಪ್ಪಿದ ಘಟನೆ ಹೆಗ್ಗೆರೆ ಗ್ರಾಮದಲ್ಲಿ, ಭಾನುವಾರ ತಡರಾತ್ರಿ 11.30 ಕ್ಕೆ ನಡೆದಿದೆ.

ವಿಷ ಕೊಟ್ಟವಳಗೇನು ಗೋತ್ತು ವಿಶ್ವಾಸದ ಬೆಲೆ ಅಥವಾ ಮರಣ ಪ್ರೇಮದ ಗೂಡು ಸೇರಿದ ಹಕ್ಕಿ ಎಂಬ ಸಾಮಾಜಿಕ ನಾಟಕದ ವಿಲನ್ ಪಾತ್ರದಾರಿ ಸಂತೋಷ್(35) ಮೊದಲನೆ ದೃಶ್ಯ ಮುಗಿಸಿ ಎರಡನೇ ದೃಶ್ಯಕ್ಕೆ ಸಿದ್ಧವಾಗುತ್ತಾ ಇರುವ ಸಂದರ್ಭದಲ್ಲಿ ನಾಟಕದ ಸ್ಟೇಜಿನ ಮೇಲೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಹೃದಯಾಗಾತಕ್ಕೆ ತುತ್ತಾಗಿ ನಾಟಕದ ಹೆಸರಿನಲ್ಲೇ ಬರುವಂತೆ ವಿಲನ್ ಪಾತ್ರದಾರಿ ಸಂತೋಷ್ ಅವರ ಮರಣ ಪ್ರೇಮದ ಗೂಡು ಸೇರಿದ ಹಕ್ಕಿಯಂತೆ ಮರಳಿ ಬಾರದ ಊರಿಗೆ ತೆರಳಿದ್ದಾರೆ.

ಈ ನಾಟಕ ನೋಡಲು ಬಂದಂತಹ ವಿವಿಧ ಗ್ರಾಮಗಳ ಹಾಗೂ ಗ್ರಾಮಸ್ಥರು ಸೇರಿದಂತೆ ಬಂದಿದ್ದ ಪ್ರೇಕ್ಷಕರಲ್ಲಿ ಕಣ್ಣೀರು ಹರಿಸಿದ ಪ್ರಸಂಗ ಜರುಗಿದೆ. ಈ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

About The Author

Namma Challakere Local News
error: Content is protected !!