ಚಳ್ಳಕೆರೆ ನ್ಯೂಸ್ : ಬಯಲು ಸೀಮೆ ಚಳ್ಳಕೆರೆ ಸತತವಾಗಿ ಬರಗಾಲಕ್ಕೆ ತುತ್ತಾಗಿ ಇಲ್ಲಿನ ರೈತ ಸಂಕುಲ ಸ್ಥಿತಿ ಚಿಂತಾಜನಕವಾಗಿದೆ, ಆದ್ದರಿಂದ ಸ್ಥಳಿಯ ಶಾಸಕರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಸಾಗರದ ೦.೨೫ ಟಿಎಂಸಿ ನೀರನ್ನು ಸರಕಾರದಿಂದ ಬಿಡುಗಡೆ ಮಾಡಿಸುವಂತೆ ಮನವಿ ಮಾಡುತ್ತೆನೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಸೂರನಹಳ್ಳಿಶ್ರೀನಿವಾಸ್ ಮನವಿ ಮಾಡಿದ್ದಾರೆ.
ಅವರು ಬಿಜೆಪಿ ಕಾರ್ಯಲಾಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಕುಡಿಯುವ ನೀರಿನ ತಾತ್ವರ ಬಂದೋದಗಿದೆ, ಅದರಂತೆ ರೈತ ಸಂಕುಲು ಕೂಡ ಕೊಳವೆ ಬಾವಿಗಳಲಿ ನೀರು ಬತ್ತಿ ಅಂರ್ತಜಲದ ಮಟ್ಟ ಕುಸಿದುಹೊಗಿದೆ ಆದ್ದರಿಂದ ವಾಣಿವಿಲಾಸ ಸಾಗರದ ನೀರನ್ನು ವೇದಾವತಿ ಮೂಲಕ ಬಿಟ್ಟರೆ ಈ ಬಾಗದ ರೈತರ ಬೋರ್ ವೆಲ್ ಗಳು ಹಾಗೂ ಕುಡಿಯುವ ನೀರಿನ ಭವಣಿ ತಪ್ಪಿಸಬಹುದು ಆದ್ದರಿಂದ ಸಾರ್ವಜನಿರು ಹಾಗೂ ರೈತರ ಹಿತ ದೃಷ್ಠಿಯಿಂದ ಸ್ಥಳಿಯ ಶಾಸಕರು ಅರ್ತಿ ತುರ್ತಾಗಿ ೦.೨೫ ಟಿಎಂಸಿ ನೀರನ್ನು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!