ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮೊಗಲ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಂದು ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ
ಡಿ.ಡಿ.ಪಿ ಐ ಶ್ರೀಯುತ ರವಿಶಂಕರ್ ರೆಡ್ಡಿ ರವರು ಕಾರ್ಯಕ್ರಮವನ್ನು ತೆಂಗಿನ ಸಸಿ ನೆಡುವ ಮೂಲಕ ಹಾಗೂ ದೀಪ ಬೆಳಗಿಸುವ ಮೂಲಕ
ಉದ್ಘಾಟಿಸಿದರು.
ನಂತರ ಶ್ರೀಮತಿ ರೂಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೊಡಗನೂರು ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇತ್ತೀಚಿನ ಮಕ್ಕಳು ಸಮಾಜದಲ್ಲಿ ಬೇರೆ ಬೇರೆ ದುಶ್ಚಟಗಳಿಗೆ ಮೊಬೈಲ್ ಎಂಬ ಭೂತಕ್ಕೆ ದಾಸರಾಗುತ್ತಿದ್ದು ತುಂಬಾ ಬೇಸರದ ಸಂಗತಿ ಹಾಗಾಗಿ ಇವರ ಮುಂದಿನ ಭವಿಷ್ಯದ ಬಗ್ಗೆ ಪೋಷಕರು ವಿಶೇಷವಾಗಿ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಶಾಲಾ ಕಟ್ಟಡಗಳಿಗೆ ಒಂದು ಲಕ್ಷ ವೆಚ್ಚದ ಬಣ್ಣ ಮಾಡಿಸಿ, ಧ್ವನಿ ವರ್ಧಕ , ಅಲ್ಮೇರಾ ಮತ್ತು ಕುರ್ಚಿಗಳನ್ನು ಶಾಲೆಗೆ ನೀಡಲಾಯಿತು.
ಒಟ್ಟು ಶಾಲಾ ಅಭಿವೃದ್ದಿಗಾಗಿ ಒಂದೂವರೆ ಲಕ್ಷ ಧನ ಸಂಗ್ರಹ ಮಾಡಿ ಶಾಲೆಗೆ ವಿನಿಯೋಗಿಸಲಾಯಿತು.
ನನ್ನ ಶಾಲೆ ನನ್ನ ಜವಾಬ್ದಾರಿ ಅನ್ನುವ ಸರ್ಕಾರದ
ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೊದಲು ಅನುಷ್ಠಾನಕ್ಕೆ ತಂದ ಹೆಗ್ಗಳಿಕೆ ನಮ್ಮದು ಅನ್ನು ಮಾತನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ದೊರೆಯಿತು.
ನಂತರ ವೇದಿಕೆಯ ಮೇಲಿರುವ ಎಲ್ಲ ಗಣ್ಯ ಮಾನ್ಯರು ಮತ್ತು ಎಲ್ಲ ಹಳೆಯ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರನ್ನು ಮತ್ತು ಹಾಲಿ ಶಿಕ್ಷಕರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ
ಶ್ರೀಯುತ ರವಿಶಂಕರ್ ರೆಡ್ಡಿ ಶಿಕ್ಷಣ ಇಲಾಖೆ, ಚಿತ್ರದುರ್ಗ, ಕೆ ನಾಗರಾಜ್ ಸಮಾಜ ಕಲ್ಯಾಣ ಇಲಾಖೆ, ಜೆ ಡಿ ನಿವೃತ್ತಿ ಶಿಕ್ಷಕರಾದ ಶ್ರೀಅಪ್ಪಳ್ಳಿ ಸರ್ ಶ್ರೀ ತಿಪ್ಪೇಸ್ವಾಮಿ ನಿವೃತ್ತಿ ಶಿಕ್ಷಕರು, ಶ್ರೀ ಅಬ್ದುಲ್ ರಶೀದ್ ನಿವೃತ್ತಿ ಶಿಕ್ಷಕರು ಶ್ರೀಮತಿ ಬಿ ನಾಗಮ್ಮ ನಿವೃತ್ತಿ ಶಿಕ್ಷಕರು,
ಶ್ರೀ ಕಾಂತರಾಜ್ ಎಂ.ಜಿ ನಿವೃತ್ತಿ ಶಿಕ್ಷಕರು, ಕೌಸರ್ ಸಾಬ್ ಶಿಕ್ಷಕರು ಶ್ರೀಮತಿ ಮಂಜುಳಾ ಟಿ ಶಿಕ್ಷಕರು ಶ್ರೀಮತಿ ವಜ್ರಗಂಗಮ್ಮ ಶಿಕ್ಷಕರು ಶ್ರೀಮತಿ ಜ್ಞಾನ ಜ್ಯೋತಿ ಶಿಕ್ಷಕರು ಮೊಗಲಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ತಿಪ್ಪೇರುದ್ರಪ್ಪ, ಈಶ್ವರಪ್ಪ ಸುಜಾತ ಮತ್ತು ಊರಿನ ಗ್ರಾಮಸ್ಥರು,ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಜಾತ ಪ್ರಾರ್ಥಿಸಿದರು, ಸಿದ್ದಾರ್ಥ್.ವಿ ಬಿ.ಜೆ.ಪಿ ಎಸ್ಸಿ ಮೋರ್ಚಾ ಅಧ್ಯಕ್ಷರು, ಮೊಳಕಾಲ್ಮುರು ಇವರು ಸ್ವಾಗತಿಸಿದರು, ಹಳೇಯ ವಿದ್ಯಾರ್ಥಿಯಾದ ಚಿದಾನಂದ ರೆಡ್ಡಿಯವರು ವಂದಿಸಿದರು.
ಎಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.