ಚಳ್ಳಕೆರೆ ನ್ಯೂಸ್ : ಮಾ.18ರ ಒಳಗೆ ರೈತರು ಕಟ್ಟಿದ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಹಾಕಲಿಲ್ಲವಾದರೆ ತೀವ್ರತರವಾದ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರಾಜ್ಯ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ರಾಜ್ಯ ರೈತ ಸಂಘದ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮೂರು ಸಂಘಗಳ ಪದಾಧಿಕಾರಿಗಳು ಮಾತನಾಡಿದ ಅವರು, ರೈತರ ಜೀವದ ಜೊತೆ ಚೆಲ್ಲಾಟ ಹಾಡುವ ಸರಕಾರಗಳು ಇದುವರೆಗೆ ರೈತರು ಕಟ್ಟಿದ ಬೆಳೆವಿಮೆ ನೀಡಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಕೇವಲ ಎರಡು ಸಾವಿರ ಹಾಕಿದ ಸರಕಾರಗಳು ಇದುವರೆಗೆ ರೈತರ ಕಡೆ ಮುಖ ಮಾಡಿಲ್ಲ, ಇನ್ನೂ ಬರಗಾಲ ಆವರಿಸಿ ದನಕರುಗಳಿಗೆ ಮೇವು ನಿರಿಲ್ಲ, ಕುಡಿಯಲು ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೊಗುತ್ತಿದೆ ಈಗೇ ರೈತ ಸಂಕಷ್ಟದಲ್ಲಿ ಕಾಲ ದೂಡುತ್ತಿದ್ದಾನೆ ಎಂದರು.
ಇನ್ನೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರು ಬೆಳೆವಿಮೆ ಕಟ್ಟುವಾಗ ಹೆಂಡತಿಯ ಬಂಗಾರದ ಒಡವೆ ಅಡವಿಟ್ಟು ಕೃಷಿ ಮಾಡಿ ಜೊತೆಗೆ ಬೆಳೆವಿಮೆ ಕಟ್ಟಿದ್ದಾನೆ, ಇನ್ನೂ ಬೆಳೆವಿಮೆ ಕಟ್ಟುವಾಗ ಸಮಯ ನಿಗಧಿ ಮಾಡಿದ ಇನ್ಯೂರೆನ್ಸ್ ಕಂಪನಿಗಳು ಇಗೂ ಬೆಳೆ ವಿಮೆ ಕೊಡುವಾಗ ಸರಿಯಾದ ಸಮಯಕ್ಕೆ ವಿಮೆ ಮೊತ್ತ ಪಾವತಿಸುವುದಿಲ್ಲ ಇದರಿಂದ ಸರಕಾರಗಳು ರೈತರ ಬಗ್ಗೆ ಕಾಳಜಿ ಇಲ್ಲದೆ ಕೇವಲ ಗ್ಯಾರಂಟಿಗಳಲ್ಲಿ ಕಾಲ ದೂಡುತ್ತಿದೆ, ಫೆ.29ರ ಒಳಗೆ ರೈತರ ಖಾತೆಗೆ ವಿಮೆಮೊತ್ತ, ಪರಿಹಾರ ಹಾಕುತ್ತೆವೆ ಎಂದು ಆಶ್ವಾಸನೆ ನೀಡಿದ ಜಿಲ್ಲಾಧಿಕಾರಿಗಳು ಇದುವರೆಗೆ ರೈತರ ಖಾತೆಗೆ ಹಣ ನೀಡಿಲ್ಲ, ಇನ್ನೂ ಮಾರ್ಚ18ರ ಒಳಗೆ ಬೆಳೆವಿಮೆ ಹಾಗೂ ಬೆಳೆಪರಿಹಾರದ ಮೊತ್ತ ಹಾಕಿಲ್ಲವಾದರೆ ಜಿಲ್ಯಾಧ್ಯಾಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ ಮಾತನಾಡಿ, ಇಂದು ಬಯಲು ಸೀಮೆಯ ಜನರಿಗೆ ಗುಳೆಹೋಗುವ ಪರಸ್ಥಿತಿ ಬಂದೋದಗಿದೆ, ಆದರೆ ಸರಕಾರಗಳು ಮಾತ್ರ ಈ ರೈತರ ಗೋಳಿಗೆ ಕಿವಿಗೊಡದೆ ಇರುವುದು ವಿಪರ್ಯಾಸವೇ ಸರಿ, ಮಾರ್ಚ 18ರ ಒಳಗೆ ಬೆಳೆವಿಮೆ, ಹಾಗೂ ಬೆಳೆಪರಿಹಾರ ಹಾಕಿದಿದಲ್ಲಿ ಪ್ರತಿಭಟನೆ ಮಾಡಿ ಸರಕಾರಕ್ಕೆ ದಿಕ್ಕಾರ ಕೂಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ರೈತರ ಮುಖಂಡ ತಿಪ್ಪೆಸ್ವಾಮಿ, ಡಾ.ಆರ್.ಎ.ದಯಾನಂದಮೂರ್ತಿ, ಚಿಕ್ಕಣ್ಣ, ಮಂಜುನಾಥ್, ಇನ್ನೂ ಹಲವು ಪದಾಧಿಕಾರಿಗಳು ಹಾಜರಿದ್ದರು.