ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ ನಾನು ಕೂಡ ಸ್ಪರ್ಧಿಸುವೆ : ನಿವೃತ್ತ ಮುಖ್ಯ ವ್ಯವಾಸ್ಥಾಪಕ ಡಿ.ಕೃಷ್ಣಮೂರ್ತಿ
ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯಿಂದ ಮತದಾರರ ಒತ್ತಾಯದ ಮೇರೆಗೆ ಜನರ ಸೇವೆ ಮಾಡಲು ನಾನು ಈ ಬಾರಿ ರಾಜಾಕೀಯಕ್ಕೆ ಬಂದಿದ್ದೆನೆ ಎಂದು ನಿವೃತ್ತ ಮುಖ್ಯ ವ್ಯವಾಸ್ಥಾಪಕ ಡಿ.ಕೃಷ್ಣಮೂರ್ತಿ ಹೇಳೀದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಚಿತ್ರದುರ್ಗ ಜಿಲ್ಲೆ ತುಂಬಾ ಹಿಂದೂಳಿದ ಜಿಲ್ಲೆಯಾಗಿದೆ ಇಲ್ಲಿ ಕುಡಿಯುವ ನೀರಿನಿಂದ ಹಿಂಡಿದು ಪ್ರತಿಯೊಂದಕ್ಕೂ ತಾತ್ಪರ ಇದೆ ಅಭಿವೃದ್ದಿ ಎಂಬುದು ಮರಿಚೀಕೆಯಾಗಿದೆ, ಕೊಳವೆ ಬಾವಿಗಳ ನೀರು ಬಿಟ್ಟರೆ ಯಾವುದೇ ನೀರಾವರಿ ಮೂಲ ಇಲ್ಲ, ಆದ್ದರಿಂದ ಈ ಭಾಗದಲ್ಲಿ ಹುಟ್ಟಿದ ನಾನು ಏನಾದರೂ ಈ ಭಾಗದ ಜನರಿಗೆ ಸೇವೆ ಮಾಡಲು ಬಂದಿದ್ದೆನೆ, ನಾನೂ ಮೂಲತಃ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದವನು ಇಲ್ಲಿ ಹುಟ್ಟಿ ರಾಜ್ಯದ ಹಲವಾರು ಭಾಗಗಳಲ್ಲಿ ಬ್ಯಾಂಕ್ ವ್ಯವಾಸ್ಥಾಪಕರಾಗಿ ಸೇವೆ ಸಲ್ಲಿಸಿದ್ದೆನೆ ರೈತರ ಮನೋವುಗಳನ್ನು ಕಂಡಿದ್ದೆನೆ.
ಆದ್ದರಿAದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಸ್ಪರ್ಧೇ ಆಕಾಂಕ್ಷಿಯಾಗಿದ್ದೆನೆ, ಆದ್ದರಿಂದ ರಾಷ್ಟಿçÃಯ ಪಕ್ಷಗಳಿಂದ ಟಿಕೆಟ್ ಕೊಟ್ಟರೆ ನಾನು ಸ್ವೀಕರಿಸುವೆ ಇಲ್ಲ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜನರ ಸೇವೆಗೆ ಬದ್ದನಾಗಿದ್ದೆನೆ ಎಂದಿದ್ದಾರೆ.