ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಕಾಶಿ ಎಂದೆ ಖ್ಯಾತಿ ಪಡೆದಿರುವ ಐತಿಹಾಸಿಕ ಶ್ರೀ ಗುರು ತಿಪೇರುದ್ರಸ್ವಾಮಿಯ ಮಾರ್ಚ್ 26ರಂದು ದೊಡ್ಡ ರಥೋತ್ಸವ ಜರುಗಲಿದ್ದು ರಥ ಸಿದ್ಧಗೊಳಿಸುವ ಕಾರ್ಯ ಆರಂಭಗೊಂಡಿದೆ.

ಕಾಯಕಯೋಗಿ ಮಾಡಿದಷ್ಟು ನೀಡಭಿಕ್ಷೆ ಎಂಬ ವಾಣಿಯ ನಾಡಿಗೆ ಪರಿಚಯಿಸಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥದ ತೆಂಗಿನ ಗರಿಯ ಹೊದಿಕೆಯನ್ನು ತೆಗೆಯುವುದರೊಂದಿಗೆ ತೇರನ್ನು ಸಿದ್ಧಗೊಳಿಸುವ ಕಾರ್ಯಗಳು ಆರಂಭಗೊಂಡಿದೆ.

ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ರಥವೇ ಪ್ರಮುಖ ಆಕರ್ಷಣೆ ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆ ಮಾರ್ಚ್ 26ರಂದು ಜರುಗಲಿದೆ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸೇರಿದಂತೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥ ನೆಲದಿಂದ 70 ಅಡಿ ಎತ್ತರವಿರುವ ಸುಮಾರು 200 ಟನ್ ತೂಕವಿರುವ ರಥವನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ.
ರಥದ ನಿರ್ಮಾಣಕ್ಕೆ ಹೊನ್ನೆ ನಂದಿ ಹಾಗೂ ಆಸ್ಟ್ರೇಲಿಯನ್ ಹೊನ್ನೆ ಜಾತಿಯ ಮರ ಬಳಸಲಾಗಿದೆ.
ಸಾಮಾನ್ಯವಾಗಿ ಎಲ್ಲಾ ರಥಗಳಿಗೆ ನಾಲ್ಕು ಗಾಲಿಗಳಿದ್ದರೆ ಇಲ್ಲಿನ ರಥಕ್ಕೆ ಐದು ಗಾಲಿಗಳಿರುವುದು ವಿಶೇಷ.
ರಥದಿನ್ನೆಯಲ್ಲಿ ಚಲಿಸುವಾಗ ಮಧ್ಯದಲ್ಲಿರುವ ಐದನೇ ಗಾಲಿಗೆ ಹೆಚ್ಚುವರಿ ತೂಕ ವರ್ಗಾವಣೆಯಾಗುತ್ತದೆ. ಐದುಗಾಲಿಗಳ 10 ಅಡಿ ವ್ಯಾಸವನ್ನು ಹೊಂದಿರುವ 20 ಅಡಿ ಉದ್ದ ಅಗಲದ ಚೌಕದ ಪೀಠವು ನೆಲದಿಂದ 20 ಅಡಿ ಎತ್ತರದಲ್ಲಿದೆ 20 ಅಡಿಯ ಚೌಕಾಕಾರದ ರಚನೆ ಮೇಲೆ 9 ಮರದ ಅಂತಸ್ತುಗಳನ್ನು ನಿರ್ಮಿಸಲಾಗಿದೆ 20 ಅಡಿ ಎತ್ತರದ ಪೀಠವು ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥವನ್ನು ಎಳೆಯಲಾಗುವುದು.

ತೆರಿಗೆ ಹೂದಿಸಿದ್ದ ತೆಂಗಿನ ಗರಿಗಳನ್ನು ತೆಗೆದ ನಂತರ ರಥದ ಸಿದ್ಧತೆಗಳು ಆರಂಭವಾಗುತ್ತವೆ..
ಪ್ರತಿವರ್ಷ ದಂತೆ ದೇವಸ್ಥಾನಗಳಿಗೆ ಸುಣ್ಣ ಬಣ್ಣಗಳ ಕಾರ್ಯವಾಗುತ್ತದೆ ದೇವಾಲಯದ ಒಳಮಠ ಹೊರಮಠಗಳಲ್ಲಿ ಸುಣ್ಣ ಹಾಗೂ ಬಣ್ಣ ಹಾಕಲಾಗುತ್ತದೆ.
ಒಳಮಠದ ಮುಂಭಾಗದಲ್ಲಿ ತೆಂಗಿನ ಗರಿಗಳ ಚಪ್ಪರ ನಿರ್ಮಿಸಲಾಗುತ್ತದೆ ಗುಗ್ಗರಿ ಹಬ್ಬ ಗಾಲಿ ಪೂಜೆ ಮುಂತಾದವುಗಳು ಸಂಪ್ರದಾಯಿಕ ಕಾರ್ಯಕ್ರಮ ಜರುಗುತ್ತವೆ. ನಾಯಕ ಮಣೆಗಾರ. ಗೊಲ್ಲ ಗೊಂಚಿಗಾರ ತಳವಾರ ಹೀಗೆ ಗ್ರಾಮದ ಪ್ರತಿಯೊಂದು ಜಾತಿಯ ಜನರು ರಥೋತ್ಸವ ನಾನಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.

About The Author

Namma Challakere Local News
error: Content is protected !!