ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ಮಾರ್ಚ 10 ರಂದು ಭಾನುವಾರ ಬೆಳ್ಳಿಗೆ 11 ಗಂಟೆಗೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಕರೆಯಾಲಾಗಿದೆ ಎಂದು ಚಳ್ಳಕೆರೆ ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು, ಜಿಲ್ಲಾ ಅಧ್ಯಕ್ಷರ ಸೂಚನೆಯಿಂತೆ ಇಂದು ಕಸಾಪ ಅಜೀವ ಸದಸ್ಯರನ್ನು ಆಹ್ವಾನಿಸಲಾಗಿದೆ, ಇನ್ನೂ ತಾಲೂಕು ಘಟಕಗಳ ಸದಸ್ಯರು ಕಾರ್ಯಕ್ರಮಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಇನ್ನೂ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸಗಳನ್ನು ಕೈಗೊಳ್ಳುವ ಬಗ್ಗೆ, ಜಿಲ್ಲೆಯಲ್ಲಿ ಕಸಾಪ ಕಾರ್ಯಕ್ರಮಗಳನ್ನು ಚುರುಕುಗೊಳಿಸುವ ಬಗ್ಗೆ, ಕಾರ್ಯನಿರ್ವಹಿಸದ ಪದಾಧಿಕಾರಿಗಳ ಕ್ರಮದ ಬಗ್ಗೆ, ಹಾಗೂ ಮತ್ತಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು,
ಇದೇ ಸಂಧರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಜಿಟಿ.ವೀರಭದ್ರಸ್ವಾಮಿ, ಕಸಬಾ ಹೋಬಳಿ ಘಟಕ ಅಧ್ಯಕ್ಷ ಡಿ.ದಯಾನಂದ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಈರಣ್ಣ, ಕಸಾಪ ನಿದೇರ್ಶಕರಾದ ಶಿವಮೂರ್ತಿ ಇತರರು ಇದ್ದರು.

About The Author

Namma Challakere Local News
error: Content is protected !!