ಚಿತ್ರದುರ್ಗ : ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬೆಳವಣಿಗೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪ 82 ಎಕರೆ ಜಮೀನು ಮಂಜೂರು ಮಾಡಿರುವ ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕದ ಮಾದಿಗ ಸಮಾಜದ ವತಿಯಿಂದ ದಿ:01-05-2022 ರ ಭಾನುವಾರ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಲಾಯಿತು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ನಾಡಿನ ಮಾಜಿ ಉಪ ಮುಖ್ಯಮಂತ್ರಿಗಳು,ಬೃಹತ್ ನೀರಾವರಿ ಸಚಿವರಾದ ಗೋವಿಂದ ಎಂ, ಕಾರಜೋಳ. ಕೇಂದ್ರ ಸಚಿವರಾದ ಎ, ನಾರಾಯಣಸ್ವಾಮಿ. ಮಾಜಿ ಸಂಸತ್ ಸದಸ್ಯರು ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎನ್ ಚಂದ್ರಪ್ಪ, ಸಮಾಜದ ಹಿರಿಯ ಮುಖಂಡರಾದ ಮಾರಸಂದ್ರ ಮುನಿಯಪ್ಪ. ಹಿರಿಯ ಐ.ಎ.ಎಸ್ ಅಧಿಕಾರಿ ಬಿ.ಹೆಚ್ ಅನಿಲ್ ಕುಮಾರ್. ಸಚಿವರಾದ ಆನಂದ್ ಸಿಂಗ್. ಶಾಸಕರಾದ ಗೂಳಿಹಟ್ಟಿ ಡಿ ಶೇಖರ್. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಕೋಟೆ. ನಿವೃತ್ತ ಉಪ ವಿಭಾಗಾಧಿಕಾರಿ ಪುರುಷೋತ್ತಮ್. ಡಿ.ಎಸ್ ಮಾಳಗಿ. ಯೋಗೀಶ್ ಸೋರೆಕುಂಟೆ. ವೆಂಕಟೇಶ್ ದೊಡ್ಡೇರಿ. ಮುತ್ತಣ್ಣ ಬೆನ್ನೂರು.ಹನುಮಂತರಾಜು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!