ಚಳ್ಳಕೆರೆ : ಎಚ್.ಪಿ.ಪಿ.ಸಿ‌. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರವಾದ ಸ್ಥಾನಕ್ಕೆ ಇಂದು ಪ್ರಾಂಶುಪಾಲರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಯು. ನರಸಿಂಹಮೂರ್ತಿ ಅಧಿಕಾರ ಸ್ವೀಕರಿಸಿದರು.

ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನಲ್ಲಿ ಪ್ರತಿಷ್ಠಿತ ಕಾಲೇಜಾಗಿ ಹೊರಹೊಮ್ಮಿದ್ದು, ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಹಾಗೂ ಕನ್ನಡ, ಸಮಾಜಶಾಸ್ತ್ರ, ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ಒಳಗೊಂಡಂತೆ ಸುಮಾರು 3 ಸಾವಿರ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ.

ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳದ್ದೇ ಕಾಲೇಜಿನಲ್ಲಿ ಮೇಲುಗೈ. ಇಂತಹ ಕಾಲೇಜಿಗೆ ಕೇಂದ್ರ ಸರ್ಕಾರದ ನ್ಯಾಕ್. ಬಿ ಶ್ರೇಣಿ ಮಾನ್ಯತೆ ದೊರಕಿದೆ.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಯು.ನರಸಿಂಹಮೂರ್ತಿ, ಕಾಲೇಜಿನ ಎಲ್ಲಾ ವಿಭಾಗದಲ್ಲೂ ಶೈಕ್ಷಣಿಕ ಗುಣಮಟ್ಟದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು.

ಹಾಗೂ ಎಲ್ಲಾ ವಿಭಾಗದಲ್ಲಿ ಇರುವ ಶೈಕ್ಷಣಿಕ ಕುಂದು ಕೊರತೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಾಲೇಜಿನಲ್ಲಿ ಸುಸಜ್ಜಿತವಾದ ಕೊಠಡಿಗಳಿದ್ದು, ಉಪಗ್ರಹ ಆಧಾರಿತ ಶಿಕ್ಷಣ ಆಧುನಿಕ ಪರಿಕರಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆ ಕಾಲೇಜಿನಲ್ಲಿದೆ.

ಅವುಗಳನ್ನು ಬಳಸಿಕೊಂಡು ಕಾಲೇಜಿನಲ್ಲಿ ಉದ್ಯೋಗ ಆಧಾರಿತ, ಮೌಲ್ಯಾಧಾರಿತ ಹಾಗೂ ಕೌಶಲ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುವುದು.

ಸದರಿ ವರ್ಷ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಆಡಳಿತ ವ್ಯವಸ್ಥೆಯ ಮೌಲ್ಯಮಾಪನ‌ ಮಾಡಲು ಕೇಂದ್ರದ ಯುಜಿಸಿ ತಂಡ ಬರಲಿದ್ದು, ಉತ್ತವಾದ ಮೌಲ್ಯಾಂಕಗಳನ್ನು ಪಡೆಯುವ ಸಲುವಾಗಿ ವಿಭಾಗವಾರು ಅಧ್ಯಾಪಕರ ತಂಡಗಳನ್ನು ರಚಿಸಿ ಅಗತ್ಯ ದಾಖಲೆಗಳ ಸಿದ್ಧತೆಗೆ ಕಾರ್ಯೋನ್ಮುಖರಾಗಲು ಸೂಚಿಸಲಾಗುವುದು. ಹಾಗೇ ಕ್ರೀಡೆ, ಸಾಂಸಕೃತಿ ಚಟಿವಟಿಕೆಗಳ ಸಾಧನೆಗೆ ಉತ್ತೇಜನ ನೀಡಲಾಗುವುದು.

ಒಟ್ಟಾರೆಯಾಗಿ ಬಯಲು ಸೀಮೆಯ ಜ್ಞಾನ ಕೇಂದ್ರವಾದ ಕಾಲೇಜಿನಲ್ಲಿ ಉತ್ತಮವಾದ ಕಲಿಕಾ ವಾತವರಣವನ್ನು ಸೃಷ್ಠಿಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಪ್ರಧ್ಯಾಪಕರಾದ ಬಿ.ಎಚ್.ಮಂಜುನಾಥ್, ಡಾ.ಚಿತ್ತಯ್ಯ.ಕೆ, ಡಾ.ರಾಜಣ್ಣ.ಜಿ.ವಿ, ಕೃಷ್ಣೇಗೌಡ, ಸತೀಶ್, ಮುರಳಿ, ಡಿ.ಎನ್.ರಘುನಾಥ್, ಗ್ರಂಥಪಾಲಕರಾದ ಪಾಪಣ್ಣ, ಅಧೀಕ್ಷಕ ವಿ.ವಿನೇಶ್ ಇದ್ದರು.

About The Author

Namma Challakere Local News
error: Content is protected !!