ಚಳ್ಳಕೆರೆ : ಶಾಂತಿ ಸೌಹಾರ್ದ ತೆಯಿಂದ ಹಿಂದೂ ಮುಸ್ಲಿಂ ಭಾಂದವರು ತಮ್ಮ ತಮ್ಮ ಹಬ್ಬಗಳನ್ನು ಆಚರಿಸಬೇಕು, ರಂಜಾನ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಂತೆ ನೋಡಿಕೊಳ್ಳಬೇಕು ಎಂದು ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ ಹೇಳಿದ್ದಾರೆ
ನಗರದ ಪೊಲೀಸ್ ಠಾಣೆ ಯಲ್ಲಿ ಇಂದು ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಚಳ್ಳಕೆರೆಯಲ್ಲಿ ಇದೂ ವರೆಗೆ ಯಾವುದೇ ಮುಸ್ಲಿಂ ಹಾಗೂ ಹಿಂದೂ ಹಬ್ಬಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದೆ ಆದ್ದರಿಂದ ಮುಸ್ಲಿಂ ಸಮುದಾಯದ ಬಾಂಧವರು ಆಚರಿಸುವ ರಂಜಾನ್ ಹಬ್ಬದಲ್ಲಿ ಕೋಮು ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಹೇಳಿದರು
ಪಿಎಸ್ಐ ಕೆ ಸತೀಶ್ ನಾಯ್ಕ್ ಮಾತನಾಡಿ ರಂಜಾನ್ ಮುಸ್ಲಿಂ ಧರ್ಮದ ಪ್ರತೀಕ ಇಂತಹ ಹಬ್ಬದಲ್ಲಿ ಇತರ ಸಮುದಾಯದವರೊಂದಿಗೆ ಸೌಹಾರ್ದ ಕಾಪಾಡಿಕೊಂಡು ಆಚರಿಸಬೇಕು, ಅದರಂತೆ ನಾಲ್ಕನೇ ಅಲೆಯ ಮುನ್ಸೂಚನೆಯ ಮೇರೆಗೆ ಸರಕಾರದ ಕೊವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಪಿಎಸ್ಐ2 ತಿಮ್ಮಣ್ಣ, ಹೆಚ್.ಎಸ್.ಸೈಯದ್, ಅನ್ಚರ್ ಭಾಷ್, ಇತ್ಯಾದಿ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.