ಚಳ್ಳಕೆರೆ : ಬೆಲ್ದಾರಹಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ 53 ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ

ತಳಕು ಹೋಬಳಿಯ ಬೆಲ್ದಾರಹಟ್ಟಿಯ ಗ್ರಾಮಸ್ಥರ ಸಮ್ಮುಖದಲ್ಲಿ ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ 53 ನೇ ವರ್ಷದ ಹುಟ್ಟುಹಬ್ಬದ ಆವರಿಸಿಕೊಂಡರು.

ಈ ವೇಳೆ ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಮಾತನಾಡಿ ನಮ್ಮ ಅಧ್ಯಕ್ಷರಾದ ಈ ರಾಮರೆಡ್ಡಿ ಅವರು ಬೆಲ್ದಾರಹಟ್ಟಿ ಗ್ರಾಮಸ್ಥರ ಮನಸ್ಸಿನಲ್ಲಿ ಶಾಶ್ವತವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನನಾಯಕರಾಗಿ ಈ ಭಾಗದಲ್ಲಿ ಗುರುತಿಸಿಕೊಂಡು ಜನರ ಕಷ್ಟ ಸುಖದಲ್ಲಿ ತೊಡಗಿಕೊಂಡಿದ್ದಾರೆ.

ಶ್ರೀ ಗೌರಸಂದ್ರ ಮಾರಮ್ಮ ದೇವಿಯು ಆಶೀರ್ವಾದದಿಂದ ಇಂತಹ ನೂರಾರು ಹುಟ್ಟುಹಬ್ಬವನ್ನು ಆಚರಣೆಯನ್ನು ಆಚರಿಸಿಕೊಳ್ಳುವ ಶಕ್ತಿಯನ್ನು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಅವರಿಗೆ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಆಶೀರ್ವದಿಸಲಿ ಎಂದು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಶ್ರೀ ಪಿ ಶಿವಣ್ಣ, ಮೊಳಕಾಲ್ಮುರು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಣ್, ಮೊಳಕಾಲ್ಮೂರು ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಡಾ ಮಂಜುನಾಥ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ರೂಪಮ್ಮ ತಿಪ್ಪೇಸ್ವಾಮಿ, ಗೋವಿಂದಪ್ಪ ಹೊನ್ನೂರ್, ನಾಯಕನಹಟ್ಟಿ ಮಂಡಲ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ ಚನ್ನಗಾನಹಳ್ಳಿ ಮಲ್ಲೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನಟರಾಜ್ ಹಿರೇಹಳ್ಳಿ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮಾಜಿ ಓಬಣ್ಣ, ಎಸ್ ನಾಗರಾಜು ಹಿರೇಹಳ್ಳಿ, ಎ ವಿ ಮಹೇಶ್ ಎನ್ಎಲ್ ಮಾರುತಿ ನಾಯಕ, ಸುಧೀರ್ ತಿಪ್ಪೇಸ್ವಾಮಿ ರೇಖಲಗೆರೆ, ಸಾಮಾಜಿಕ ಜಾಲತಾಣ ಸಹ ಸಂಚಾಲಕ ಡಿ ಬಿ ಮಂಜುನಾಥ್, ಇನ್ನು ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!