ಚಳ್ಳಕೆರೆ ನ್ಯೂಸ್ : ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ ಎಂದು ಪೌರಾಯುಕ್ತ ಸಿ ಚಂದ್ರಪ್ಪ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು.
ಚಳ್ಳಕೆರೆ ನಗರಸಭೆ ಕಛೇರಿಯಲ್ಲಿ ಇ-ಆಸ್ತಿ ಸೇವೆ ಆಂದೋಲನ ನಗರದ ನಾಲ್ಕು ಬ್ಲಾಕ್ ಗಳಲ್ಲಿ ನಡೆಯುತ್ತಿದೆ.
ಫೆ.10 ರಿಂದ ಮಾರ್ಚ್ .12 ರವರೆಗೆ ಈ ಆಂದೋಲನ ನಡೆಯುತ್ತಿದೆ ಆದ್ದರಿಂದ ಸಾರ್ವಜನಿಕರು ತಮ್ಮ ಆಸ್ತಿಗಳನ್ನು ಇ ಆಸ್ತಿ ಗೆ ಸೆರ್ಪಡೆ ಮಾಡಿಕೊಳ್ಳುವ ಮೂಲಕ ಆಂದೋಲನದಲ್ಲಿ ಬಾಗಿಯಾಗಿ.
ಇನ್ನೂ ಫೆ.10 ರಿಂದ ಇಲ್ಲಿಯವರೆಗೆ ಸುಮಾರು 250 ಇ-ಆಸ್ತಿಗಳನ್ನು ಮಾಡಲಾಗಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.
ಇನ್ನೂ ಇ- ಆಸ್ತಿಗೆ ಪ್ರಮುಖವಾಗಿ ಬೇಕಾಗುವ ದಾಕಲಾತಿಗಳು ಅರ್ಜಿ ಪಾರಂ, ಭೂಪರಿವರ್ತನೆ ಆದೇಶ ಪ್ರತಿ, ನಕ್ಷೆ ಪ್ರತಿ, ಕ್ರಯಪತ್ರ, ಇಲ್ಲವೆ ಹಕ್ಕು ಪತ್ರದ ಪ್ರತಿ, ಆಸ್ತಿಗೆ ಹಾಗೂ ನೀರಿನ ತೆರೆಗೆ ಪಾವತಿಸಿದ ರಶೀದಿ, ಆಸ್ತಿಯ ಹಿಂದಿನ ದಾಖಲಾತಿಗಳು, ನೀವೇಶನದ ಛಾಯಚಿತ್ರ, ಮಾಲೀಕರ ಭಾವಚಿತ್ರ, ಗುರುತಿನ ಚೀಟಿ ಹೊದಗಿಸಬೇಕು ಎಂದು ಕೋರಿದ್ದಾರೆ