ಹೌದು
ಚಳ್ಳಕೆರೆ
ಇದು ನಗರದ ಮಹಿಳ ಮತ್ತು ಮಕ್ಕಳ ಆಶ್ಪತ್ರೆಯಲ್ಲಿ ಮಗು ಹಾಲು ಸೇವಿಸುವ ಸಂದರ್ಭದಲ್ಲಿ ಹಾಲು ಶ್ವಾಸಕೋಶಕ್ಕೆ ಹೋಗಿ ಉಸುರುಗಟ್ಟಿ ಮೃತಪಟ್ಟಿದೆ ಎಂದು ಮಕ್ಕಳ ತಜ್ಞೆ ಡಾ. ಪಂಕಜಾ ಹೇಳಿದರು.
ಮಗುವಿಗೆ ಜಾಂಡೀಸ್ ಇದ್ದ ಕಾರಣ ಚಿಕಿತ್ಸೆ ನೀಡಲಾಗಿತ್ತಿತ್ತು ಈ ಸಂದರ್ಭದಲ್ಲಿ ಮಗುವಿನ ಪೋಷಕರು ಆತುರಕ್ಕೆ ಬಿದ್ದು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲು ಹೋಗಿದ್ದಾರೆ
ಖಾಸಗಿ ವೃದ್ಯ ತಪಾಸಣೆ ಮಾಡಿ ಮಗುವಿಗೆ ಹೃದಯ ಸಮಸ್ಯೆಇದೆ ಎಂದು ಸಲಹೆ ನೀಡಿದ್ದಾರೆ.
ನಂತರ ಪೋಷಕರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದು ದಾಖಲು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಗು ಹಾಲು ಕುಡಿಯುವಾಗ ಹಾಲಿನ ಹನಿ ಶ್ವಾಸಕೋಶಕ್ಕೆ ಹೋಗಿ ಕೆಮ್ಮಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದೆ ಹೊರದು ಚಿಕಿತ್ಸೆಯಿಂದ ಅಲ್ಲ ಎಂದು ವೈದ್ಯೆ ಡಾ.ಪಂಕಜ ಪೋಷಕರಿಗೆ ಮನವರಿಕೆ ಮಾಡಿದ್ದಾರೆ.
ಮಗು ಜನನದ ನಂತರ 7 ದಿನಗಳ ಕಾಲ ಯಾವುದೇ ವೈದ್ಯರು ಗ್ಯಾರೆಂಟಿ ನೀಡುವುದಿಲ್ಲ ಈ ಹಿನ್ನೆಲೆಯಲ್ಲಿ ನಾವು ಯಾವುದೇ ರೀತಿಯ ಮಗುವಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷವಹಿಸಿಲ್ಲ ಮಗುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿ ಎಂದು ಹೇಳಿಲ್ಲ ಎಂದು ವೈದ್ಯೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅನ್ನಪೂರ್ಣಮ್ಮ ಓಬಣ್ಣ ಮಾತನಾಡಿ, ಆಸ್ಪತ್ರೆಯಲ್ಲಿರು ವೈದ್ಯರು ನರ್ಸ್ ಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸ್ಪಂಧಿಸುವುದಿಲ್ಲ ,ರಾತ್ರಿ ವೇಳೆ ವೈದ್ಯರು ಯಾರೂ ಇರುವುದಿಲ್ಲ, ರೋಗಿಗಳಿಗೆ ಚಿಕಿತ್ಸೆ ನೀಡಲು ಬರುವುದಿಲ್ಲ ರಾತ್ರಿ ವೇಳೆ ಮಕ್ಕಳಿಗೆ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ .? ಸರಕಾರಿ ವೈದ್ಯರು ಸರಕಾರಿ ವೇತನ ತಿಂದು ಜನಸಾನ್ಯರಿಗೆ ಚಿಕಿತ್ಸೆ ನೀಡದೆ ಉಡಾಪೆ ಉತ್ತರ ನೀಡುತ್ತಾರೆ, ಈ ನಿಟ್ಟಿಲ್ಲ ನಮ್ಮ ಮಗುವಿಗೆ ಆದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಆಸ್ಪತ್ರೆ ವೈದ್ಯರ ಹಾಗೂ ಸಿಬ್ಬಂದಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಮಗುವಿನ ತಂದೆ ಗುರು ತಾಯಿ ವಾಣಿ ಮಗುವಿನ ಸಾವಿನಿಂದ ಅಕ್ರಾಂದನ ಮುಗಿಲು ಮುಟ್ಟಿದೆ, ಇನ್ನು ಮುಂದೆಯಾದರೂ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಗುಣಟ್ಟದ ಚಿಕಿತ್ಸೆ ಹಾಗೂ ಸ್ಪಂಧಿಸಿ ಚಿಕಿತ್ಸೆ ನೀಡುವರೇ ಕಾದು ನೋಡ ಬೇಕಿದೆ.