ಚಳ್ಳಕೆರೆ ನ್ಯೂಸ್ : ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಂತೆ ಮಾರುಕಟ್ಟೆ ಹಾಗು ಇತರೆ ಸ್ಥಳಗಳನ್ನು ಇಂದು ಹರಾಜು ಮಾಡುವ ಮೂಲಕ ಜಕಾತಿ ವಸೂಲಿಗೆ ಗ್ರೀನ್ ಸಿಗ್ನಲ್ ನೀಡಿದರು.
ನಗರದಲ್ಲಿ ಈಗಾಗಲೇ ಗುರುತಿಸಲ್ಪಡುವ ವಾರದ ಸಂತೆ ಜಕಾತಿ ವಸೂಲಿ ಹಾಗೂ ದಿನವಹಿ ವಸೂಲಾತಿ, ಖಾಸಗಿ ಬಸ್ ನಿಲ್ದಾಣ ಭಾಗದ ವಾಹನಗಳ ಸುಂಖ ವಸೂಲಾತಿ, ಹರಾಜು ಪ್ರಕ್ರಿಯೆ ನಡೆಯಿತು.
ಪೌರಾಯುಕ್ತ ಸಿ ಚಂದ್ರಪ್ಪ ಹಾಗೂ ಹಲವು ಸದಸ್ಯರು ಸಮ್ಮುಖದಲ್ಲಿ ನಡೆದ ಸುಂಖ ವಸೂಲಾತಿ ಹರಾಜು ಪ್ರಕ್ರಿಯೆಗೆ ಬಿಡ್ಡುದಾರರು ಆಗಮಿಸಿ ತಮ್ಮ ಹರಾಜುನ್ನುಪಡೆದು ಕೊಂಡರು
ಇನ್ನೂ ನಗರದಲ್ಲಿ ಬರುವ ದಿನವಹಿ ಸಂತೆ ವಸೂಲಾತಿ ಸುಂಖ ಹರಾಜು ಪ್ರಕ್ರಿಯೆಯಲ್ಲಿ ಪಿ.ಸುರೇಶ್ ಎಂಬುವವರಿಗೆ 50.ಲಕ್ಷ ರೂಪಾಯಿಗಳಿಗೆ ಹರಾಜು ಪಡೆದರು.
ಇನ್ನೂ ವಾರದ ಸಂತೆ ವಸೂಲಾತಿ ಸುಂಖ ಟಿ.ಗೋವಿಂದರಾಜು ಎಂಬುವವರಿಗೆ ಸುಮಾರು 9. ಲಕ್ಷದ 40 ಸಾವಿರ ರೂಪಾಯಿಗೆ ಪಡೆದರು.
ಇನ್ನೂ ಖಾಸಗಿ ವಾಹನಗಳು ಸುಂಖ ವಸೂಲಾತಿಗೆ ಹರಾಜು ಸರಕಾರಿ ಮೊತ್ತಕ್ಕಿಂತ ಕಡಿಮೆ ಹರಾಜು ಹಾಗದ ಕಾರಣ ಇದನ್ನು ಮುಂದಿನ ಬಾರಿ ಹರಾಜು ಮಾಡಲಾಗುವುದು ಪೌರಾಯುಕ್ತ ಸಿ ಚಂದ್ರಪ್ಪ ಹೇಳಿದರು..
ಇನ್ನೂ ಈ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಕೆ.ವೀರಭದ್ರಪ್ಪ, ರಮೇಶ್ ಗೌಡ, ಎನ್.ಜಯಣ್ಣ, ಮಂಜುಳಾ ಪ್ರಸನ್ನ ಕುಮಾರ್, ರುದ್ರನಾಯಕ, ಮಲ್ಲಿಕಾರ್ಜುನ, ನಾಗವೇಣಿ, ಹಾಗೂ ಇತರೆ ಸದಸ್ಯರು, ಇಂಜಿನಿಯರ್ ವಿನಯ್ ಕುಮಾರ್, ಅಧಿಕಾರಿ ಸಿಬ್ಬಂದಿಯವರು ಹಾಜರಿದ್ದರು.