ಚಳ್ಳಕೆರೆ ನ್ಯೂಸ್ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ ಹೌದು. ಪ್ರಸ್ತುತ ದಿನಮಾನಗಳಲ್ಲಿ ಎಷ್ಟೋ ಘಟನಾವಳಿಗಳನ್ನು ನಾವು ನೋಡುತ್ತವೆ, ಆದರೆ ಇಳಿವಯಸ್ಸಿನಲ್ಲೂ ಪತ್ನಿಯ ಸಾವಿನ ಸುದ್ದಿಕೇಳಿ ಪತಿ ಕೂಡ ಚಿರನಿದ್ರೆಗೆ ಜಾರುವುದು ವಿಪರ್ಯಾಸವೆ ಸರಿ
ಇಂತಹದೊAದು ಅಪರೂಪದ ಘಟನೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಪತ್ನಿ ಎನ್.ಶಾರದಮ್ಮ ಸಾವಿನ ಸುದ್ದಿ ತಿಳಿದು ಪತಿ ಸುಬ್ಬರಾವ್ ಸಹ ಸೋಮವಾರ ಮೃತಪಟ್ಟ ಘಟನೆ ನಡೆದಿದೆ.
ಪತ್ನಿ ಶಾರದಮ್ಮ ಅನಾರೋಗ್ಯ ಹಿನ್ನೆಲೆ ಮೃತಪಟ್ಟಿದ್ದರು. ಪತ್ನಿ ಅಂತ್ಯಕ್ರಿಯೆ ಬಳಿಕ ಪತಿ ಸುಬ್ಬರಾವ್ ಸಾವನ್ನಪ್ಪಿರುವುದು ಸಾವಿನಲ್ಲಿ ಒಂದಾದ ವೃದ್ಧದಂಪತಿಯ ಘಟನೆ ಕಂಡು ದುಃಖತಪ್ತರಾದ ಸಂಬAಧಿಕರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ ವೃದ್ದ ದಂಪತಿಗಳು ಸಾವಿನಲ್ಲಿ ಒಂದಾಗಿದ್ದಾರೆ…