ಚಳ್ಳಕೆರೆ ನ್ಯೂಸ್ : ನಗರದ ರೋಟರಿ ಬಾಲ ಭವನದಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ ಸೋಲೇನಹಳ್ಳಿ ಮತ್ತು ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆ, ಚಿತ್ರದುರ್ಗ ಹಾಗೂ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಗುಬ್ಬಿ ಇವರ ಸಹಯೋಗದೊಂದಿಗೆ ” ತೃತೀಯ ರಾಜ್ಯ ಸಾಹಿತ್ಯ ಸಮ್ಮೇಳನ 2024 ಪ್ರಥಮ ವಾರ್ಷಿಕೋತ್ಸವ ಹಾಗು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ರಾಜ್ಯ ಮಟ್ಟದ ಕವಿ ಗೋಷ್ಠಿ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಯೂರವರ್ಮ ಪ್ರಶಸ್ತಿ ಪುರಸ್ಕೃತರಾದ ಗಣಪತಿ ಗೋ ಛಲವಾದಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಫಿವುಲ್ಲಾ ರವರು ಮಾತನಾಡಿ ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಯಬೇಕಾದರೆ ಸಮಾಜದಲ್ಲಿ ಕವಿಗಳು ಮತ್ತು ಸಾಹಿತಿಗಳು ಬರೆಯುವಂತಹ ಕವಿತೆಗಳನ್ನು ಮತ್ತು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅಲ್ಲದೆ ಇತ್ತೀಚಿನ ಮಕ್ಕಳು ಮೊಬೈಲ್ ಎಂಬ ಭೂತಕ್ಕೆ ದಾಸರಾಗಿರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು.

ನಂತರ ಗಣಪತಿ ಗೂ ಛಲವಾದಿ ಸಾಹಿತಿಗಳು ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಬಸವಣ್ಣನವರು ನಡೆಸಿದ ಚಳುವಳಿಗಳು ಸಾಮಾಜಿಕ ಶಕ್ತಿಯಾಗಿ ಉಳಿಡುಕೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನಂತರ ರಾಜು ಎಸ್ ಸೋಲೇನೆಹಳ್ಳಿ ರವರ ” ಪ್ರೇಮ ಸ್ಪರ್ಶ “ಸಿಂಚನ ಎಂ.ಎನ್ ಗೊರಹಳ್ಳಿ ರವರ ” ಭಾವನೆಗಳ ಬೆನ್ನೇರಿ ” ಮತ್ತು ರಮಾ ಫಣಿ ಭಟ್ ಗೋಪಿ ರವರ ವಿರಚಿತ ” ಆಕಾಶ ಬುಟ್ಟಿ ” ಎಂಬ ಮೂರು ಕವನ ಸಂಕಲನಗಳನ್ನು ಹಿರಿಯ ಸಾಹಿತಿಗಳು ಕವಿಗಳು ಆದ ಕೊರ್ಲಕುಂಟೆ ತಿಪ್ಪೇಸ್ವಾಮಿ ರವರು ಲೋಕಾರ್ಪಣೆ ಮಾಡಿ ಇಂತಹ ಸಾಹಿತ್ಯದ ಪುಸ್ತಕಗಳನ್ನು ಇಂದಿನ ಯುವ ಪೀಳಿಗೆ ಓದುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಒಬ್ಬ ಉತ್ತಮ ಪ್ರಜೆಯಾಗಿ, ಸುಸಂಸ್ಕೃತ ವ್ಯಕ್ತಿಯಾಗಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ಡಾ.ಮುಕಂದರಾಜು, ಸಂಘಟನಾ ಸಂಚಾಲಕ ಕೋಡಿಹಳ್ಳಿ ಟಿ.ಶಿವಮೂರ್ತಿ, ಅಂಜನ್ ಕುಮಾರ್, ಏಚ್.ಎಸ್ ಗೌಡರ, ಡಾ.ಬಸವರಾಜ್ ಪೂಜಾರ್ ಕೋಡಿಹಳ್ಳಿ, ಸಿಂಚನ.ಎA.ಎನ್ ಗೊರಹಳ್ಳಿ, ಭರತ್.ಕೆ ಉಪಸ್ಥಿತರಿದ್ದರು,

About The Author

Namma Challakere Local News
error: Content is protected !!