ಚಳ್ಳಕೆರೆ : ಇಡೀ ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ಎಂದು ಚಳ್ಳಕೆರೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಹೇಳೀದರು.
ಅವರು ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆದ ಶ್ರೀ ಮೋಪೂರಸ್ವಾಮಿ ದೇವಸ್ಥಾನ ಸಮಿತಿ ಹಾಗೂ ಕುಂಬಾರ ಒಕ್ಕೂಟ ಪರಶುರಾಂಪುರ ಇವರ ವತಿಯಿಂದ ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆದ ಶ್ರೀ ಸರ್ವಜ್ಞ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅನ್ಯರಿಗೆ ಟೀಕೆ, ಟಿಪ್ಪಣಿ, ನಿಂದನೆ ಅನುಸರಿಸದೇ ಸಾಹಿತ್ಯದ ಮೂಲಕ ಅಂದಿನ ವಚನಕಾರರು ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ಮೀಸಲಿಟ್ಟು ಹಗಲಿರುಳು ಶ್ರಮಿಸಿದರೆ ಎಂದು ತಿಳಿಸಿದರು.
ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಕುಂಬಾರ ಸಮುದಾಯ ಹಿಂದುಳಿದಿದ್ದು ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಧರಣಿ ನಡೆಸಿ ಬೇಡಿಕೆ ಸಲ್ಲಿಸಿದ್ದರೂ ಸಹ ಸರಕಾರ ನಿಗಮ ಸ್ಥಾಪನೆಗೆ ಮುಂದಾಗುತ್ತಿಲ್ಲ ಕೂಡಲೆ ರಾಜ್ಯದ ಶಾಸಕರು ಸರಕಾರಕ್ಕೆ ಒತ್ತಡ ಹಾಕುವ ಮೂಲಕ ಕುಂಬಾರ ಅಭಿವೃದ್ಧಿನಿಗಮ ಸ್ಥಾಪನೆಗೆ ಮುಂದಾಗ ಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಂಬಾರ ಒಕ್ಕೂಟದ ಅಧ್ಯಕ್ಷರಾದ ಸಿದ್ದೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗಳೂರುಸ್ವಾಮಿ, ಮುಖಂಡರುಗಳಾದ ರುದ್ರೇಶ್, ನಾಗಭೂಷಣ, ಪ್ರಕಾಶ್, ರವಿ, ವೀರೇಶ್, ಬಡಗಿ ಪಾಪಣ್ಣ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.