ಚಳ್ಳಕೆರೆ : ಮಧ್ಯ ಕರ್ನಾಟಕದಲ್ಲಿ ಕಮರಿಹೊಗುವ ಕಲೆಯನ್ನು ಚಿಗುರಿಸುವ ಕೆಲಸವಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಅದ್ಬುತ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಎಲ್.ಐ.ಸಿ.ರಂಗಸ್ವಾಮಿ ಹೇಳಿದರು.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದಿಂದ ಆಯೋಜಿಸಿದ್ದ ಸ್ಥಳೀಯ ಕಲಾಪ್ರೇಮಿ ನಾಟಕಕಾರ ನಾಗರಾಜ್ ರವರಿಗೆ ನಟಶೇಖರ್ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನಿಸಿ ಅಭಿನಂದಿಸಿ ನಂತರ ಮಾತನಾಡಿದರು,
ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಂತಹ ಕಲೆಯನ್ನು ಪ್ರತಿಯೊಬ್ಬರು ಪ್ರೋತ್ಸಹಿಸಿದಾಗ ಮಾತ್ರ ಕಲೆಗೆ ಬೆಲೆಸಿಗುತ್ತದೆ, ಕೆಸರಲ್ಲಿ ಕಮಲ ಹೇಗೆ ಅರಳುವುದೇ ಹಾಗೇ ಕಲೆ ಬಡವರ ಮನೆಯಲ್ಲಿ ಸಿರಿಗೊಂಡಿರುತ್ತದೆ. ಆದ್ದರಿಂದ ಕಲೆಯನ್ನು ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬರು ಹೊಂದಿರಬೇಕು ಎಂದರು.
ಅಕಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ತಮ್ಮ ಸ್ವಂತ ಖರ್ಚಿನಲ್ಲಿ ನಾಟಕ ಹಾಡಿಸುವ ಪ್ರೋವೃತ್ತಿ ಬೆಳೆಸಿಕೊಂಡಿರುವ ಇಂತವರ ಕಲೆ ಪ್ರೋತ್ಸಾಹಿಸುವ ಮೂಲಕ ಹುರಿದುಂಬಿಸಬೇಕು ಇಂತಹ ವ್ಯಕ್ತಿಗಳು ಸಿಗುವುದು ಅಪರೂಪ, ನಮ್ಮಲ್ಲಿ ಇಂತಹ ಕಲಾವಿದರು ಇರುವುದು ನಮ್ಮ ಹೆಮ್ಮೆಯ ವಿಷಯ ಎಂದರು.
ಸನ್ಮಾನಿತ ನಟಕಕಾರ ನಾಗರಾಜ್ ಮಾತನಾಡಿ, ಕುರುಕ್ಷೇತ್ರ ಎನ್ನುವುದು ಕೇವಲ ಒಂದು ನಾಟಕ ಅಲ್ಲ, ಅದು ನಿಜ ಜೀವನದ ಒಂದು ಕಥೆ ಅದರಿಂದ ಈಗೀನ ಯುವ ಪಿಳಿಗೆ ತಿಳಿಯುವುದು ತುಂಬಾ ಇದೆ ಗಿತಿಸಿ ಹೊದ ಘಟನೆಗಳನ್ನು ಮತ್ತೆ ಮರುಕಳಿಸುವ ಒಂದು ಕೃಡೀಕೃತ ಕಥೆಯೇ ಇದಾಗಿದೆ,
ಈ ಕುರುಕ್ಷೇತ್ರ ನಾಟಕದಲ್ಲಿ ಸುಮಾರು 69 ನಾಟಕದಲ್ಲಿ ಅಭಿನಯ ಮಾಡಿ ಇಂದು 70 ನೇ ನಾಟಕ್ಕಕೆ ಬಣ್ಣ ಹಚ್ಚುತ್ತೆದ್ದೆನೆ ರಾಜ್ಯದ ತುಂಬೆಲ್ಲ ಶಕುನಿ ಪಾತ್ರದ ಮೂಲಕ ಅಭಿನಯಸಿದ್ದೆನೆ ಎಂದರು.
ಈದೇ ಸಂಧರ್ಭದಲ್ಲಿ ಬೇಕರಿವಿಜಯ್, ಎಂ.ಬಿ.ಬೋರಣ್ಣ, ನಾಗರಾಜ್, ಬೋರಯ್ಯ, ಓ.ಬೋರಯ್ಯ, ಕಾಟಪನಹಟ್ಟಿ ಬೋರಯ್ಯ, ಗಾಡಿಓಬಣ್ಷ, ರಾಜಣ್ಣ, ದಾದಪೀರ್, ಬಾಷ್‌ಸಾಬ್, ಜಗನ್ನಾಥ, ದಯಾನಂದ, ಹನುಮಂತರಾಯ್, ದುರುಗೇಶ್, ನಾಗರಾಜ್, ತಮ್ಮಣ್ಣ, ಹನುಮಂತರಾಯ್, ದಯಾನಂದಮೂರ್ತಿ, ಇತರರು ಇದ್ದರು.