ಚಳ್ಳಕೆರೆ : ಮಾನವೀಯತೆ ಮೆರೆದ ಯಾದವ್ ಸಮಾಜದ ಜೋಗಿಹಟ್ಟಿ ಗ್ರಾಮಸ್ಥರು
ಹೌದು ನಿಜಕ್ಕೂ ಪ್ರಾಣಿ ಹಾಗೂ ಮನುಷ್ಯ ಸಂಕುಲ ಬೇರೆ ಬೇರೆ ಅಲ್ಲವೇ ಅಲ್ಲ, ಜೀವ ವೊಂದೇ ದೇಹಗಳು ಬೇರೆ ಬೆರೆ ಆದರೆ
ಬುದ್ದಿ ಜೀವಿಯಾದ ಮನುಷ್ಯ ಮಾತ್ರ ಬಿನ್ನ, ಆದರೆ ಕಷ್ಟದಲ್ಲಿ ಮಾತ್ರ ಇತರ ಜೀವಿಗಳಿಗೆ ನೋವು ಉಂಟಾದಾಗ ಮಾತ್ರ ಮನುಷ್ಯ ಸಹಕರಿಸುವುದು ಮನುಷ್ಯನ ಗುಣ ಧರ್ಮ ಅಂತೆಯೇ,
ಇಂದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಜೋಗಿಹಟ್ಟಿ ಗ್ರಾಮದಲ್ಲಿ ನಾಯಿ ಕಡಿತಕ್ಕೆ ಕೋತಿ ಸಾವನ್ನಪ್ಪಿತ್ತು ಇದನ್ನು ಕಂಡ ಗ್ರಾಮಸ್ಥರು ಕೋತಿಗೆ ಗ್ರಾಮದ ಜೋಗಿಹಟ್ಟಿ ಯಾದವ ಸಮಾಜದ ಮುಖಂಡರು ಸ್ಥಳೀಯರು ಸೇರಿ ಕೋತಿಗೆ ಮಾನವೀಯ ದೃಷ್ಟಿಯಿಂದ ಸಂಪ್ರದಾಯದಂತೆ ನಾವು ಮನುಷ್ಯರಿಗೆ ಯಾವ ರೀತಿ ಸಂಸ್ಕಾರದಿಂದ ಮಣ್ಣು ಮಾಡುತ್ತೇವೆ
ಅದೇ ರೀತಿಯಲ್ಲಿ ಗ್ರಾಮದಲ್ಲಿ ತಮಟೆ, ಉರಿಮೆ ಮೇಳದೊಂದಿಗೆ ಕೋತಿಗೆ ಶವಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಜೋಗಿಹಟ್ಟಿ ಯಾದವ ಸಮಾಜದ ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ : ರಾಮು ದೊಡ್ಮನೆ, ಚಳ್ಳಕೆರೆ