ಚಳ್ಳಕೆರೆ : ಬದಲಾಗುತ್ತಿರುವ ಸಮಾಜದಲ್ಲಿಕನ್ನಡ ಭಾಷೆಯನ್ನು ಪೋಷಣೆ ಮಾಡಿಕೊಳ್ಳುವ ಜಾಗೃತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದುಕನ್ನಡಅಭಿವೃದ್ಧಿ ಪ್ರಾಧಿಕಾರ ಜಿಲ್ಲಾಕನ್ನಡ ಜಾಗೃತಿ ಸಮಿತಿ ಸದಸ್ಯೆ, ಕವಯಾತ್ರಿದಯಾವತಿ ಪೂತ್ತೂರುಕರ್ ಹೇಳಿದರು.
ಕನ್ನಡಅಭಿವೃದ್ಧಿ ಪ್ರಾಧಿಕಾರ,ತಾಲೂಕಿನ ವಿವಿಧಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನಿ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿದಿನದ ವ್ಯವಹಾರದಲ್ಲಿ ಕನ್ನಡ ಬಳಕೆ ಆಗುವಂತೆ ನಡೆದುಕೊಳ್ಳಬೇಕು.ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿಸಿಕೊಳ್ಳುವ ಕೆಲಸ ಆಗಬೇಕು.
ವ್ಯಾಪರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾಷೆಯಲ್ಲಿಮೊದಲ ಆದ್ಯತೆಯಂತೆಎಚ್ಚರ ವಹಿಸಬೇಕು ಎಂದು ಹೇಳಿದರು.
ಪತ್ರಕರ್ತಟಿ.ಜೆತಿಪ್ಪೇಸ್ವಾಮಿ ಮಾತನಾಡಿ, ಗ್ರಾಹಕ ವಲಯದಲ್ಲಿ ಸೇವೆ ಮಾಡುವ ಬ್ಯಾಂಕ್,ಅಂಚೆ ಇಲಾಖೆ ಸೇರಿದಂತೆ ಸಾರ್ವಜನಿಕ ವ್ಯವಹಾರಿಕ ಸ್ಥಳದಲ್ಲಿ ಕನ್ನಡದಲ್ಲಿ ನಾಮಫಲಕಇರಬೇಕು.
ಕನ್ನಡ ಭಾಷೆ ಬಳಸುವ ಮೂಲಕ ಕನ್ನಡಿಗರ ಭಾವನೆಗಳನ್ನುಗೌರವಿಸಬೇಕು ಎಂದು ಹೇಳಿದರು.
ಜಾತಾ:-ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕೆರ್ ವೃತ್ತದ ಮಾರ್ಗವಾಗಿ ಕನ್ನಡ ಮತ್ತುಡಾ.ರಾಜ್‌ಕುಮಾರ್ ಅಭಿಮಾನದ ಘೋಷಣೆ ಕೂಗುತ್ತಾ ನೆಹರು ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ಬಳಿಕ,ಕೆಲ ಅಂಗಡಿಗಳಿಗೆ ಭೇಟಿ ಮಾಡಿಆಂಗ್ಲ ಭಾಷೆಯ ನಾಮ ಫಲಕಗಳನ್ನು ತೆರವುಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಸ್ತವನೆಯನ್ನು ನೀಡಲಾಯಿತು.
.
ನಗರಸಭಾ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ರುದ್ರನಾಯಕ, ಸದಸ್ಯ ಹೊಯ್ಸಳ ಗೋವಿಂದ, ಕನ್ನಡಪರ ಸಂಘಟನೆಯ ಆರ್.ಪ್ರಸನ್ನಕುಮಾರ್, ಲೋಕಮಾನ್ಯ,ನೇತಾಜಿ ಪ್ರಸನ್ನ,ಕೊರ‍್ಲಕುಂಟೆ ತಿಪ್ಪೇಸ್ವಾಮಿ, ಯಾದಲಗಟ್ಟೆ ಜಗನ್ನಾಥ, ಪಿ.ಮಂಜುನಾಥ, ಮಧಕರಿ ನಗರ ಭದ್ರಿ,ಎಚ್.ಲಂಕಪ್ಪ,ಗೌರೀಶ್, ಕಲಾವಿದನಾಗೇಂದ್ರಪ್ಪ, ಕ್ಲಾಸಿಕ್ ಚಂದ್ರಶೇಖರ್, ಎಚ್.ತಿಪ್ಪೇಸ್ವಾಮಿ, ಫರೀಧ್‌ಖಾನ್, ನಗರಂಗೆರೆರವಿ, ಬಸವರಾಜ, ಬೆಳಗೆರೆ ಪ್ರವೀಣ್, ರಾಜಣ್ಣ ಮತ್ತಿತರರುಇದ್ದರು.
ವರದಿ: ರಾಮುದೊಡ್ಮನೆ