ಚಳ್ಳಕೆರೆ : ಬರಪೀಡಿತ ಪ್ರದೇಶಗಳ ಜನತೆಗೆ ಸಹಯವಾಗಲೆಂದು ಸರ್ಕಾರ ಹಲವಾರು ಯೋಜನೆಗಳಲ್ಲಿ ಕುಡಿಯುವ ನೀರಿನ ಯೋಜನೆಯು ಒಂದು.

ಕುಡಿಯುವ ನೀರಿನಿಂದ ಮನುಷ್ಯನಿಗೆ ಆಪತ್ತು ಇದೆ ಎಂದು ಪ್ಲೋರೈಡ್ ಮುಕ್ತ ನೀರನ್ನು ಜನತೆಗೆ ಹೊದಗಿಸುವ ಸಲುವಾಗಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತಾಲ್ಲೂಕಿನಾದ್ಯಂತ ಸ್ಥಾಪಿಸಲಾಗಿದೆ. ಆದರೆ ಘಟಕ ಸ್ಥಾಪಿಸುವ ಮುನ್ನ ತಾ ಮುಂದೂ ನೀ ಮುಂದೂ ಎಂಬಂತೆ ಮುಗಿ ಬಿದ್ದ ಕಂಪನಿಗಳ ಮಾಲೀಕರು ಘಟಕಗಳು ಅದಗೆಟ್ಟು ಹೊದರೆ ನಮಗೇನು ಸಂಬಂಧವಿಲ್ಲವೆಂಬಂತೆ ಇದ್ದಾರೆ.


ತಾಲ್ಲೂಕಿನ ಘಟಪರ್ತಿ ಗ್ರಾಮದ ಜನತೆಗೆ ಪ್ಲೋರೈಡ್ ಯುಕ್ತ ಕುಡಿಯುವ ನೀರಿನಿಂದ ಬರುವ ರೋಗಗಳನ್ನು ಮನಗಂಡು ತಡೆಗಟ್ಟುವ ಕ್ರಮದಲ್ಲಿ ಸರ್ಕಾರ ಶುಧ್ದ ಕುಡಿಯುವ ನೀರಿನ ಘಟಕವನ್ನು ಕಂಪನಿಯವರು ವಹಿಸಿಕೊಂಡು ಸ್ಥಾಪಿಸಲಾಗಿತ್ತು.

ಆದರೆ, ಘಟಕ ಕೆಟ್ಟುಹೋಗಿ ಸುಮಾರು ತಿಂಗಳುಗಳೇ ಕಳೆದರು ರೀಪೆರಿ ಮಾಡಿಸಲು ಯಾವೋಬ್ಬ ಅಧಿಕಾರಿಗಳು ಇತ್ತ ಗಮನ ನೀಡದೆ ನಿಲ್ಯಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮದ ಸಾರ್ವಜನಿಕರು ಆರೋಪಿಸುತ್ತಾರೆ.

Namma Challakere Local News
error: Content is protected !!