ನಾಯಕನಹಟ್ಟಿ ::ಸಮೀಪದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಪ್ರಯುಕ್ತ ಮಂಗಳವಾರ ದೇವಾಲಯದ ಪಕ್ಕದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಹುಣಸೆಕಟ್ಟೆ ಗ್ರಾಮದ ಓಬಣ್ಣ ಪ್ರಥಮ ಬಹುಮಾನ 20,000 ಪಾರಿತೋಷಕ.
ದ್ವಿತೀಯ ಬಹುಮಾನ ದೊರೆಗಳಹಟ್ಟಿ ಕಿರಣ್ 15.000 ಪಾರಿತೋಷಕ. ತೃತೀಯ ಬಹುಮಾನ ತಮ್ಮಯ್ಯನಹಟ್ಟಿ ದೊಡ್ಡ ಬೋರಯ್ಯ 8,000 ರೂ.ಪಾರಿತೋಷಕ ರಾಸುಗಳಿಗೆ ಲಭಿಸಿದ್ದು.
ಸಮಾಧಾನಕರ ಬಹುಮಾನ ಎನ್ ಉಪ್ಪಾರಹಟ್ಟಿ ಅಜಯ್. 4,000 ರೂ. ಪಾರಿತೋಷಕ ನೀಡಲಾಗಿದೆ ಫೆಬ್ರವರಿ 20 ರಿಂದ ಆರಂಭವಾದ ಜೋಡೆತ್ತಿನ ಗಾಡಿ ಸ್ಪರ್ಧೆ ಫೆಬ್ರವರಿ 21ರ ಗುರುವಾರ ತೆರೆ ಬಿದ್ದಿದೆ ಎಂದು ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಕಾರ್ಯದರ್ಶಿ ಎಂವೈಟಿ ಸ್ವಾಮಿ, ನಿರ್ದೇಶಕ ಭೀಮಗೊಂಡನಹಳ್ಳಿ ಹನುಮಣ್ಣ, ನಾಗರಾಜ್, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ಜಿ ವೈ ತಿಪ್ಪೇಸ್ವಾಮಿ, ಎಸ್ ಜಿ ಬಿ ದೊಡ್ಡ ಬೋರಯ್ಯ, ಹುಣಸೆಕಟ್ಟೆ ಓಬಣ್ಣ, ಸೇರಿದಂತೆ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು