ಚಳ್ಳಕೆರೆ ನ್ಯೂಸ್ : ಬೀಡಾಡಿ ದನಗಳಿಗೆ ಬ್ರೇಕ್ ಹಾಕಲು ಕಳೆದ ಹಲವು ಸಭೆಗಳಲ್ಲಿ ಸಾರ್ವಜನಿಕರು ಗಮನ ಸೇಳೆದರು ಪ್ರಯೋಜನ ಇಲ್ಲವಾಗಿದೆ

ಇನ್ನೂ ಇಂತಹ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ‌ಓಡಾಡುವುದರಿಂದ ಆಟೋ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಘಟನೆ ಜರುಗಿದೆ.

ಚಳ್ಳಕೆರೆ ನಗರದ ಪ್ರವಾಸಿ ಮಂದಿರದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ
ಚಲಿಸುತ್ತಿದ್ದ
ಆಟೋ ರೀಕ್ಷಾ ಕ್ಕೆ ಬೀಡಾಡಿ ದನಗಳು ಅಡ್ಡ ಬಂದ ಕಾರಣ ಆಟೋ
ಪಲ್ಟಿಯಾಗಿ ಆಟೋದಲ್ಲಿ ಇದ್ದ ಮೂರು ಜನರಿಗೆ ಗಾಯಗಾಳಾಗಿ
ಪ್ರಣಾಪಾಯದಿಂದ ಪಾರಾಗಿದ್ದಾರೆ.

ನಗರದಲ್ಲಿ ಬೀಡಾಡಿ ದನಗಳ
ಕಾಟದಿಂದ ವಾಹನ ಸವಾರರಿಗೆ ತುಂಬಾ ಕಿರಿಕಿರಿಯಾಗುತ್ತಿದೆ.
ರಸ್ತೆಯಲ್ಲೆ ಮಲಗುವ ಬೀಡಾಡಿ ದನಗಳು, ವಾಹನಗಳು
ಚಲಿಸುವಾಗ ತಕ್ಷಣವೇ ಅಡ್ಡ ಬರುತ್ತವೆ. ಇದರಿಂದ ವಾಹನಗಳು
ಅಪಘಾತವಾಗುತ್ತಿವೆ ಎಂದು ಸ್ಥಳಿಯ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಅಷ್ಟೇ ಅಲ್ಲದೆ ಬೀಡಾಡಿ ದನಗಳಿಗೂ ಸಹ ಗಾಯಗಳಾಗಿ ಮೂಖ ವೇದನೆಗೆ ಕಂಬನಿ‌ ಇಲ್ಲವಾಗಿದೆ.

ಒಟ್ಟಾರೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಈ ಬಿಡಾಡಿ ದನಗಳಿಗೆ ಕಡಿವಾಣ ಯಾವಾಗ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.

About The Author

Namma Challakere Local News
error: Content is protected !!