ಚಳ್ಳಕೆರೆ ನ್ಯೂಸ್ : ಪ್ಲೆಕ್ಸ್ ಬ್ಯಾನರ್ ಗೆ ಸೀಮಿತಗೊಂಡವ ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು ಹೌದು ಈಗಂತ ಪಕ್ಷದ ಕಾರ್ಯಕರ್ತರು ಮುಖಂಡರು, ಹೆಸರು ಹೇಳಲಿಚ್ಚಿಸದ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಫೆ.24 ರಂದು ಚಳ್ಳಕೆರೆ ನಗರದಲ್ಲಿ ಇರುವ ಎರಡು ಪಕ್ಷದ ಸಭೆಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲ, ಇನ್ನೂ ಕೇವಲ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಒಂದು ಬೈಟೆಕ್ ಕೊಟ್ಟರೆ ಸಾಕೇ..?ಸಭೆ ನಡೆಯುವುದು ಚಳ್ಳಕೆರೆಯಲ್ಲಿ ಅದರ ಬಗ್ಗೆ ಮಾಹಿತಿ ನೀಡುವುದು ಜಿಲ್ಲಾ ಕೇಂದ್ರದಲ್ಲಿ ಇಂತಹ ಅವಕಾಶಗಳನ್ನು ಅನ್ಯ ಪಕ್ಷದವರು ಬಳಕೆಗೆ ಸಿಗುವ ಅವಕಾಶವಾಗಿದೆ.ಇದರಿಂದ ಪಕ್ಷದ ವರಿಷ್ಠರು, ಪದಾಧಿಕಾರಿಗಳು ಇದರ ಬಗ್ಗೆ ತಾಲೂಕು ಕೇಂದ್ರದಲ್ಲಿ ಹೇಳಿಕೆ ನೀಡಬೇಕು ಇನ್ನೂ ಪಕ್ಷದ ಕಾರ್ಯಕರ್ತ, ಮುಖಂಡರ ಸಭೆಗೆ ಭಾಗವಹಿಸಬೇಕು ಎಂದು ಮನವಿ ಮಾಡಿರಬೇಕು. ಆದರೆ ಇದು ಯಾವುದೇ ಇಲ್ಲದೆ ಫೆ.24 ಕ್ಕೆ 2024 ರ ಲೋಕಸಭಾ ಚುನಾವಣೆ ಅಂಗವಾಗಿ ಕಾರ್ಯಕರ್ತರ ಸಭೆ ಇದೆ ಎಂದು ಜೆಡಿಎಸ್ ಹೇಳಿದರೆ, ಎಸ್ಟಿ ಮುನ್ನಡೆ ಸಮಾವೇಶ ಇದೆ ಎಂದು ಬಿಜೆಪಿಯವರು ಹಾಕಿಕೊಂಡಿದ್ದಾರೆ..ಇನ್ನಾದರೂ ಪ್ಲೆಕ್ಸ್ ಬ್ಯಾನರ್ ಗೆ ಪಕ್ಷಗಳನ್ನು ಸೀಮಿತಗೊಳಿಸದೆ ಮಾಧ್ಯಮಗಳನ್ನು , ಪ್ರಕಟಣೆಗಳನ್ನು ಬಳಸಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ , ಮತದಾರರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು ಎನ್ನಲಾಗಿದೆ.