ನಾಯಕನಹಟ್ಟಿ:

ಫೆ.೧೩ರಂದು ನಡೆಯಲಿರುವ ನಾಯಕನಹಟ್ಟಿ ಬಂದ್‌ಗೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬೆಂಬಲ ನೀಡಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಇಲ್ಲಿನ ಹಿರೇಕರೆ, ಚಿಕ್ಕಕೆರೆಗಳೇ ಬಹುಹಳ್ಳಿಗಳ ಜಲಮೂಲ ಆಧಾರವಾಗಿವೆ. ಅವು ಎರಡು ದಶಕಗಳಿಂದ ಬತ್ತಿವೆ. ಅವು ತುಂಬುವ ಕೆಸಲಕ್ಕೆ ನಾನು ಎಂದಿಗೂ ಮುಂಚೂಣಿ ವಹಿಸುತ್ತೇನೆ ಎಂದರು.

ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಚೀಫ್ ಎಂಜಿನಿಯರ್ ಅವರ ಬೆನ್ನಿಗೆ ಬಿದ್ದು ಕೆರೆಗಳನ್ನು ಯೋಜನಾ ವ್ಯಾಪ್ತಿಗೆ ಸೇರ್ಪಡೆಗೆ ಶ್ರಮಿಸಿದ್ದೆ.
ಈಗಿರುವ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಾನು ಇದೇ ಭಾಗದವನು. ಇಲ್ಲೇ ಹುಟ್ಟಿ ಬೆಳೆದವನು. ಹಾಗಾಗಿ, ಕೆರೆಗಳು ಭದ್ರಾ ಮೇಲ್ದಂಡೆ ವ್ಯಾಪ್ತಿಯಿಂದ ಕೈಬಿಟ್ಟಾಗ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದೇನೆ. ಆದರೂ ನನ್ನ ಜನ‌ ಸೋಲಿಸಿದರು. ಗೆಲ್ಲಿಸಿದವರನ್ನು ಪ್ರಶ್ನಿಸಲು ಜನರಿಗೆ ಧೈರ್ಯ ಇಲ್ಲ ಎಂದರು

ಮೊದಲು ಮತಕೇಳಲು ಬಂದಾಗ ಬರದಿಂದ ಕಂಗೆಟ್ಟ ಜನರು ಇದನ್ನು ಪ್ರಶ್ನಿಸುವುದಿಲ್ಲ. ಜನರು ಪ್ರಶ್ನಿಸಿದರೆ ಮಾತ್ರ ಸರ್ಕಾರ, ಜನಪ್ರತಿನಿಧಿಗಳು ನೇರಮಾರ್ಗದಲ್ಲಿ ನಡೆಯಲು ಸಾಧ್ಯ. ಇಂದು ಜನಜಾನುವಾರಿಗೂ ಹನಿ ನೀರಿಲ್ಲ. ಕೊಳವೆ ಬಾವಿಗಳು ಬತ್ತುತ್ತಿವೆ. ಅಂತರ್ಜಲ ಪಾತಾಳ ಸೇರುತ್ತಿದೆ. ತತಕ್ಷಣ ಹಿರೇಕೆರೆ, ಚಿಕ್ಕಕೆರೆ ತುಂಬಿಸುವ ಕೆಲಸಕ್ಕೆ ಹೋಬಳಿಯಷ್ಟೇ ಅಲ್ಲ ಮತಕ್ಷೇತ್ರ ಜನರು ಬಂದ್‌ಗೆ ಬೆಂಬಲ ಸೂಚಿಸಬೇಕಿದೆ ಎಂದರು.

ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬೋರಸ್ವಾಮಿ ಇದ್ದರು.

Namma Challakere Local News
error: Content is protected !!