ಚಳ್ಳಕೆರೆ ನ್ಯೂಸ್ : ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿಯ ಶ್ರೀಪಾತಲಿಂಗೇಶ್ವರಸ್ವಾಮಿಯ ಜಾತ್ರಾಮಹೋತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಮಲ್ಲಯ್ಯ ಹೇಳಿದರು
ಅವರು, ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿವರ್ಷವೂ ಶ್ರೀಸ್ವಾಮಿಯ ಜಾತ್ರೆಯನ್ನು ಯಾವುದೇ ಲೋಪವಿಲ್ಲದೆ ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ನಡೆಸಲಾಗುತ್ತದೆ. ಮಾ.16 ಮತ್ತು 17 ಎರಡು ದಿನಗಳ ಕಾಲ ಜಾತ್ರೆ ಪೂಜಾವಿಧಿವಿಧಾನಗಳಿಂದ ನಡೆಯುವುದು. ಗೊರವಿನಕೆರೆ ವಂಶಸ್ಥರು ಸೇರಿದಂತೆ ಭಕ್ತರೆಲ್ಲರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸದಲ್ಲಿ ಭಾಗವಹಿಸಲು ಇನ್ನು ಹೆಚ್ಚು ವಿಜೃಂಭಣೆಯಿಂದ ನಡೆಸಲು ಮನವಿ ಮಾಡಿದರು.
ಕಾರ್ಯದರ್ಶಿ ಕರೀಕೆರೆ ನಾಗರಾಜು ಮಾತನಾಡಿ, 16ರಂದು ಶ್ರೀಸ್ವಾಮಿಯ ಜಾತ್ರೆ ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನದ ಸ್ಥಳಕ್ಕೆ ತೆರಳುವುದು. ನಂತರ ದೇವಸ್ಥಾನದಲ್ಲಿ ಶ್ರೀಸ್ವಾಮಿಗೆ ಪೂಜಾ ವಿಧಿವಿಧಾನಗಳನ್ನು ನಡೆಸಿ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಮಾರ್ಚ್ 17ರಂದು ಶ್ರೀಸ್ವಾಮಿಗೆ ರುದ್ರಾಭಿಷೇಕ, ಎಲೆ ಪೂಜೆ, ವಿಶೇಷ ಅಲಂಕಾರದೊಂದಿಗೆ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನಡೆಸಲಾಗುವುದು. ಜಾತ್ರೆಗೆ ಎಲ್ಲಾ ಸದ್ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ಧಾರೆ.
ಪೂರ್ವಬಾವಿ ಸಭೆಯಲ್ಲಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ವೇದಮೂರ್ತಿ, ನಿರ್ದೇಶಕರಾದ ಆರ್.ನಿಂಗಪ್ಪ, ಪ್ರಕಾಶ್, ನಗರಂಗೆರೆ ಮಹೇಶ್, ಮಂಜುನಾಥ, ನಂಜುಡಪ್ಪ, ಜಯಕುಮಾರ್, ಶಿವಣ್ಣ, ನಾಗರಾಜು, ನಿಂಗಣ್ಣ, ಚಂದ್ರಣ್ಣ ಮುಂತಾದವರು ಉಪಸ್ಥಿತರಿದ್ದರು.