ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಕೇಂದ್ರ
ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಬರ ಪರಿಹಾರ ಮತ್ತು ಬೆಳೆ ವಿಮೆ ರೈತರಿಗೆ
ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿ ಫೆಬ್ರವರಿ 9ನೇ ಶುಕ್ರವಾರದಂದು ಕರೆ ನೀಡಿದ ಚಳ್ಳಕೆರೆ ಬಂದ್ ಯಶಸ್ವಿಯಾಗಿದೆ

ಬೆಳಗ್ಗೆ 6-00 ರಿಂದ ಸಂಜೆ 6-00 ಗಂಟೆಯವರೆಗೆ ಸ್ವಯಂಪ್ರೇರಿತ
ಚಳ್ಳಕೆರೆ ಬಂದ್ ಮಾಡಲು ವಿವಿಧ ಸಂಘಟನೆಗಳು ಕರೆ‌ನೀಡಿದ ಹಿನ್ನಲೆಯಲ್ಲಿ ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಗೆ ಸಹಕಾರ ನೀಡಿದ್ದವು.

ಇನ್ನೂ
ಮಧ್ಯ ಕರ್ನಾಟಕದ ಜೀವನಾಡಿ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ
ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭದ್ರೆ ಕುಂಟುತ್ತಾ ಸಾಗಿದೆ, ಭದ್ರಾ
ಮೇಲ್ದಂಡೆ ಕಾಮಗಾರಿ ಆರಂಭವಾಗಿ 25 ವರ್ಷಗಳಾಗುತ್ತಾ ಬಂದರೂ ಇನ್ನೂ ಪೂರ್ಣಗೊಂಡಿಲ್ಲ.

ರಾಜ್ಯದ ಯಾವುದೇ
ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಇಷ್ಟೊಂದು ಸುದೀರ್ಘ ಸಮಯ ತೆಗೆದುಕೊಂಡಿಲ್ಲ. ನಮ್ಮನ್ನಾಳುವ
ಸರ್ಕಾರಗಳ ಇಚ್ಛಾಶಕ್ತಿ ಕೊರತೆ, ರೈತ ವಿರೋಧಿ ನಿಲುವು, ಸುಳ್ಳಿನ ರಾಜಕಾರಣ ಇದಕ್ಕೆ ಪ್ರಮುಖ ಕಾರಣ, ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಕಿಡಿ ಕಾಡಿದರು..

ಭದ್ರಾ ಯೋಜನೆ
ಪೂರ್ಣಗೊಳಿಸಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ರೈತರು ರೋಸಿಹೋಗಿದ್ದಾರೆ. ಹಾಗಾಗಿ
ಬೀದಿಗಿಳಿಯುವುದು ಅನಿವಾರ್ಯವಾಗಿದೆ. ಅಜ್ಜಂಪುರ ಅಬ್ಬಿನಹೊಳಲು ಬಳಿ ಒಂದೂವರೆ ಕಿ.ಮೀ, ಭೂಸ್ವಾಧೀನಕ್ಕೆ
ಅಡ್ಡಿಯಾಗಿದ್ದು ರಾಜಕಾರಣಿಗಳೇ ತೊಡರುಗಾಲು ಹಾಕಿದ್ದಾರೆ ಎಂದು ಎಐಟಿಯುಸಿ ಸಂಚಾಲಕ ಶಿವರುದ್ರಪ್ಪ ಆರೋಪಿಸಿದರು.

ಕಳೆದ 8 ವರ್ಷಗಳಿಂದ ಒಂದೂವರೆ ಕಿ.ಮೀ. ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದೇ ಇರುವುದು
ನಾಚಿಕೆಗೇಡಿನ ಸಂಗತಿ, ಓರ್ವ ಶಾಸಕನ ಮುಂದೆ ಇಡೀ ಸರ್ಕಾರವೇ ಮಂಡಿಯೂರಿರುವುದು ಪ್ರಜಾಪ್ರಭುತ್ವದ
ದುರಂತ, ಒಂದೂವರೆ ಕಿ.ಮೀ. ಭೂಸ್ವಾಧೀನವಾಗಿದ್ದರೆ ಕಳೆದವರ್ಷವೇ ನೀರು ಬರುತ್ತಿತ್ತು ಆದರೆ ಎತ್ತಿನಹೊಳೆ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ
ಉದಾಸೀನ ತೋರಿದೆ, ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಏಕೆ ಅನ್ನುವುದು ಅರ್ಥವಾಗದಂತಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ ಮಾತನಾಡಿ, ಈ
ಭಾಗದ ಜನಪ್ರತಿನಿಧಿಗಳು ತಮ್ಮ ಭದ್ರೆ ಪರವಾಗಿ ಧ್ವನಿ ಎತ್ತಲಿ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ
ನೆಲದಲ್ಲಿಯೇ ನಿಂತು ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರೂ.
ಅನುದಾನ ಒದಗಿಸುವುದಾಗಿ ಪ್ರಮಾಣ ಮಾಡಿದ್ದರು. ಆದರೆ ಇದುವರೆಗೂ ಅದು ಈಡೇರಿಲ್ಲ.
ದೇಶದ ಪ್ರಭುತ್ವದ ವಾರಸುದಾರಿಕೆ ಹೊತ್ತಿರುವ
ಪ್ರಧಾನಿ ನರೇಂದ್ರಮೋದಿಯವರ ಅನುದಾನದ ಘೋಷಣೆ ಹುಸಿಯಾಗಿದ್ದು ಸಂವಿಧಾನಿಕ ಹುದ್ದೆಗಳ ಜವಾಬ್ದಾರಿಗಳು
ನಿರ್ವಹಣೆಯಾಗುತ್ತಿರುವ ಬಗ್ಗೆ ಜನ ಅನುಮಾನ ಪಡುವಂತಾಗಿದೆ ಎಂದರು.

ಕಿಸಾನ್ ಸಂಘದ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಪ್ರತಿ ಎರಡು ವರ್ಷಕ್ಕೊಮ್ಮೆ ಬರ ಎದುರಿಸುತ್ತಿದೆ. ಭದ್ರಾ ಜಾರಿಯಾಗದಿದ್ದರೆ ರೈತಾಪಿ ಜನರ
ಬದುಕು ದುರಂತದತ್ತ ಸಾಗುತ್ತದೆ. ಈ ನೆಲದ ಜನರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ
ರಾಜಕಾರಣ ಎಚ್ಚರದಪ್ಪಿ ಮಲಗಿದೆ. ಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡಿದೆ. ಬೆಂದೊಡಲಿಗೆ ಕೊಳ್ಳಿ ಇಡುವ
ಕೆಲಸವ ಸರ್ಕಾರಗಳು ಮಾಡಬಾರದು, ಕೇಂದ್ರದ ಅನುದಾನ ನೆಚ್ಚಿ ರಾಜ್ಯಸರ್ಕಾರ ಯೋಜನೆ ಆರಂಭಿಸಿಲ್ಲ ಹಾಗಾಗಿ
ಮುಂದಿನ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡುವ ಅನುದಾನದಲ್ಲಿ ಒಂಹಪಾಲು ಭದ್ರಾಮೇಲ್ದಂಡೆ
ಯೋಜನೆಗೆ ವಿನಿಯೋಗವಾಗಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು.

ಇದೇ ಸಂಧರ್ಭದಲ್ಲಿ ತಾಲೂಕಿನ ಸುಮಾರು 55 ಸಂಘಗಳು ಈ ಚಳ್ಳಕೆರೆ ಬಂದ್ ನಲ್ಲಿ ಸ್ವಯಂ ಪ್ರೇರಿತವಾಗಿ ಬಾಗಿಯಾಗಿದ್ದವು.

ಬಂದ್ ಸುದ್ದಿ ತಿಳಿದ ಗ್ರಾಮೀಣ ಪ್ರದೇಶ ರೈತರು ಹಾಗೂ ಸಾರ್ವಜನಿಕರು ಸಂಪೂರ್ಣವಾಗಿ ಬಂದ್ ಯಶಸ್ವಿಗೆ ಸಾಕ್ಷಿಯಾಗಿದ್ದಾರೆ

ಇನ್ನೂ ಎಲ್ಲಾ ರೈತ‌ಸಂಘಗಳು ಹಾಗೂ ಸಂಘಟನೆಗಳು ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಪತ್ರ ಸಲ್ಲಿಸಿದರು.

ಬಂದ್ ಗೆ‌ ಬೆಂಬಲ‌ ಸೂಚಿಸಿದ ಸಂಘಟನೆಗಳು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ,
ಕರ್ನಾಟಕ ರಾಜ್ಯ ರೈತ ಸಂಘ,
ಅಖಂಡ ಕರ್ನಾಟಕ ರಾಜ್ಯ ರೈತ ಸಂಘ,
ಸಿ.ಪಿ.ಐ. ಮತ್ತು ಸಿ.ಪಿ.ಎಂ. ಸಂಘಟನೆ,
ಛೇಂಬರ್ ಆಫ್ ಕಾಮರ್ಸ್ ಅಸೋಸಿಯೇಷನ್ & ಇಂಡಸ್ಟ್ರೀಸ್,
ಕಿರಾಣಿ ವರ್ತಕರ ಸಂಘ,
ಬೆಳ್ಳಿ-ಬಂಗಾರದ ವರ್ತಕರ ಸಂಘ,
ಶಾಲಾ ಶಿಕ್ಷಕರ ಸಂಘ,
ಹೋಟೆಲ್ ಮಾಲೀಕರ ಸಂಘ,
ಖಾಸಗಿ ಬಸ್ ಮಾಲೀಕರ ಸಂಘ,
ಫರ್ಟಿಲೈಜರ್ ಅಸೋಸಿಯೇಷನ್,
ಬಾರ್ ಮಾಲೀಕರ ಸಂಘ,
ಲಘು ವಾಹನ ಚಾಲಕರು ಮತ್ತು ಮಾಲೀಕರ ಸಂಘ

  • ಆಟೋ ಮಾಲೀಕರು ಮತ್ತು ಚಾಲಕರ ಸಂಘ
    ಎ.ಪಿ.ಎಂ.ಸಿ. ದಲ್ಲಾಲರ ಸಂಘ
    ಎ.ಪಿ.ಎಂ.ಸಿ. ಹಮಾಲರ ಸಂಘ,
    ಲಗೇಜ್ ಆಟೋ ಮಾಲೀಕರ ಸಂಘ
    ಶಾಮಿಯಾನ ಸಪ್ಪೆಯರ್ ಸಂಘ
    ಹೂವಿನ ವ್ಯಾಪಾಲಿಗಳ ಸಂಘ
    ಬೀದಿ ಬದಿ ವ್ಯಾಪಾಲಗಳ ಸಂಘ
    ಮೈಕಾನಿಕ್ ಸಂಘಟನೆ
    ಟೈಲರ್ ಅಸೋಸಿಯೇಷನ್
    ಹಾರ್ಡ್‌ವೇರ್ ಅಂಗಡಿಗಳ ಸಂಘ
    ಬುಕ್‌ಸ್ಟಾಲ್ ಅಂಗಡಿಗಳ ಸಂಘ
  • ಪಿ.ಡಬ್ಲ್ಯು.ಡಿ ಗುತ್ತಿಗೆದಾರರ ಸಂಘ
    ಹನಿ ನೀರಾವಲ ವಿತರಕರ ಸಂಘ,
    ಸೈಬರ್ ಮತ್ತು ಜೆರಾಕ್ಸ್ ಸೆಂಟರ್ ಸಂಘ
    ಛಾಯಾಗ್ರಾಹಕರ ಸಂಘ
    ಕಟ್ಟಡ ಕಾರ್ಮಿಕರ ಸಂಘ
    ಸವಿತಾ ಸಮಾಜ ಸಂಘ
    ದಲಿತ ಸಂಘರ್ಷ ಸಮಿತಿ
    ಕನ್ನಡಪರ ಸಂಘಟನೆಗಳ ಒಕ್ಕೂಟ
    ಗುಜಲ ವಸ್ತುಗಳ ಮಾರಾಟಗಾರರ ಸಂಘ
    ಬಡಗಿ ಮತ್ತು ಕಮ್ಯಾರರ ಸಂಘ
    ಪತ್ರಕರ್ತರ ಸಂಘ
    ನೇತಾಜಿ ಪ್ರಗತಿಪರ ಸಂಘ
    ಮಹಿಳಾ ಸಂಘಟನೆಗಳ ಒಕ್ಕೂಟ
    ವಕೀಲರ ಸಂಘ
    ಖಾಸಗಿ ವೈದ್ಯರುಗಳ ಸಂಘ
    ಔಷಧಿ ಅಂಗಡಿಗಳ ಸಂಘ
    ರೈತರ ಪರಿಕರಗಳ ಮಾರಾಟಗಾರರ ಸಂಘ
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಚಳ್ಳಕೆರೆ.
    ತರಕಾರಿ ವ್ಯಾಪಾರಿಗಳ ಸಂಘ
    ಮುದ್ರಣ ಮಾಲೀಕರ ಸಂಘ (ಲ.)
    ಎಲೆಕ್ಟ್ರಾನಿಕ್ಸ್ ಮಾಲೀಕರ ಸಂಘ
    ಚರ್ಮ ಕುಶಲಕರ್ಮಿಗಳ ಸಂಘ
    ಮುಸ್ಲಿಂ ಸಂಘಟನೆಗಳು
    ಸಾ-ಮಿಲ್ ಮಾಲೀಕರ ಸಂಘ
    ಸಿಮೆಂಟ್‌ ವರ್ತಕರ ಸಂಘ
    ಬಡಲ ಕೆಲಸಗಾರರ ಸಂಘ
    ಬೈಕ್ ಮೈಕಾನಿಕ್‌ರ ಸಂಘ
    ಅಂಗಡಿಗಳ ಸಂಘ ಈಗೇ ಸುಮಾರು 55 ಸಂಘಟನೆಗಳು ಬಾಗವಹಿಸಿದ್ದವು.

ಮುಂಜಾನೆಯಿಂದ ಬಂದ್ ಉತ್ತಮ ಪ್ರತಿಕ್ರಿಯೆ ದೊರೆಯಿತು ಆದರೆ ಕೊಂಚ ಕೆಲ ಬ್ಯಾಂಕ್ ಹಾಗು ಎಲ್ ಐಸಿ ಕಛೇರಿ ಹಾಗು ಇತರೆ ಕೆಲವು ಅಂಗಡಿ‌ ಮುಗ್ಗಟ್ಟನ್ನು ಸಂಘಟನಾಕಾರರ ಜಯಕಾರಕ್ಕೆ ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದವು.

ಇದೇ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ.ರಾಘವೇಂದ್ರ ಪ್ರತಿಭಟನಜಾರರಿಗೆ ಒಂದು ಸಾವಿರ ಬಾಳೆ ಹಣ್ಣು ಕೊಟ್ಟು ಸಂಘಟನೆಯಲ್ಲಿ ತೊಡಗಿದರು‌, ಇನ್ನೂ ಸುರಕ್ಷಾ ಕ್ಲಿನಿಕ್ ಮಾಲೀಕ ಬಿ.ಪರೀದ್ ಖಾನ್ ಸಂಘಟನಾಕಾರರಿಗೆ ನೆರಳಿನ‌ ವ್ಯವಸ್ಥೆ ಮಾಡಿದರು.

ಇನ್ನೂ ನಗರಸಭೆ ಸದಸ್ಯ ರಮೇಶ್ ಗೌಡ, ಆರ್.ಪ್ರಸನ್ನ ಕುಮಾರ್, ಡಾ.ಆರ್‌ಎ.ದಯಾನಂದ ಮೂರ್ತಿ, ನೇತಾಜಿ ಪ್ರಸನ್ನ ಕುಮಾರ್, ನಬೀ ಕನ್ನಡದ ರಕ್ಷಣಾ ವೇದಿಕೆ ಶಿವಕುಮಾರ್, ಮನುದೋರೆ, ಮುಜೀಬ್, ರಂಗಸ್ವಾಮಿ, ಕುಮಾರ್, ಸೈಯದ್, ಇತರೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Namma Challakere Local News
error: Content is protected !!