ಬಯಲು ನಾಡಿನ ಪ್ರೀತಿಯ ಸಂಕೇತ ಬಿಳಿ ವಸ್ತçದ
ಖರ್ಚಿಪ್,

ಪುಟ್ಟ ಕಲ್ಲಿನ ಮನೆ ನಿರ್ಮಾಣ, ಒಮ್ಮೆ ಹೋಗಿ ಬನ್ನಿ ಪ್ರೇಮಿಗಳ ತಾಣ ಹೊಸಗುಡ್ಡಕ್ಕೆ

ರಾಮುದೊಡ್ಮನೆ ಚಳ್ಳಕೆರೆ
ಚಳ್ಳಕೆರೆ : ನೋಡವುದಕ್ಕೆ ಅದು ಕಲ್ಲಿನ ಬೆಟ್ಟ, ಸುತ್ತಲು ನಿರ್ಜನ ಪ್ರದೇಶ ಅಲ್ಲಿ ಕಾಣಬರುವುದು ಕೇವಲ ಬರಡಾದ ಬೆಂಗಾಡು, ಬಿಸಿಲಿನಿಂದ ಕೂಡಿದ ಗುಡ್ಡ ಆದರೆ ಅದೆಂತ ಪವಾಡವೋ ಗೊತ್ತಿಲ್ಲ ಇಲ್ಲಿ ಬಂದು ತಮ್ಮ ಪ್ರೀತಿಯ ಕುರುವಾಗಿ ವೃಕ್ಷಕ್ಕೆ ಬಿಳಿ ಬಣ್ಣದ ಬಟ್ಟೆ ಹಾಗೂ ಪುಟ್ಟ ಕಲ್ಲಿನ ಮನೆ ನಿರ್ಮಿಸಿದರೆ ಹೊಸಬಾಳಿಗೆ ಕಾಲಿಡುವುದು ಗ್ಯಾರಂಟಿಯAತೆ…
ಹೌದು..ಅದು ಎಲ್ಲಿ ಅಂತೀರಾ.. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 6 ಕಿಲೋ.ಮೀ. ನಡೆದರೆ ಕಲ್ಲಿನ ಹೆಬ್ಬಂಡೆ ಸಿಗುತ್ತದೆ ಅದರತ್ತ ಕಣ್ಣಾ ಹಾಹಿಸಿದರೆ ಸಿಗುವುದೆ ಹೊಸಗುಡ್ಡ, ಹೌದು ಇಲ್ಲಿ ತಮ್ಮ ಪ್ರೇಮದ ಸಂಕೇತದ ಇಲ್ಲಿನ ಸುತ್ತಲಿನ ಪ್ರೇಮಿಗಳು ಬಂದು ತಮ್ಮ ಪ್ರೇಮದ ಗೋಪುರವನ್ನು ನಿರ್ಮಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ದೇಶ ವಿದೇಶದಲ್ಲಿ ತಮ್ಮ ಪ್ರೇಯಾಸಿಗಾಗಿ, ತನ್ನ ಪ್ರೀತಿಗಾಗಿ ಗೋಪುರಗಳನ್ನು, ತಾಜ್‌ಮಹಲ್‌ನ್ನು, ಗೊಲ್‌ಗುಂಬಜ್‌ನ್ನು ನಿರ್ಮಿಸಿರುವುದು ನೋಡಿದ್ದಿರಾ, ಆದರೆ ಬಯಲು ಸೀಮೆಯಲ್ಲಿ ತಮ್ಮ ಪ್ರೀತಿಗಾಗಿ ಗುಡ್ಡದ ವೃಕ್ಷಕ್ಕೆ ಖರ್ಚಿಪ್, ನವ ಜೀವನಕ್ಕಾಗಿ ಪುಟ್ಟ ಕಲ್ಲಿನ ಮನೆ ನಿರ್ಮಿಸಿವುದು ಭವಿಷ್ಯ ಇದೇ ನಾಡಿನಲ್ಲಿರಬೇಕು.
ಹೊಸಗುಡ್ಡದ ಹಿನ್ನಲೆ:
ಅಶ್ವತ ವೃಕ್ತದ ಸುತ್ತಾ ಬಣ್ಣ ಬಣ್ಣದ ಬಟ್ಟೆಯಲ್ಲಿ ಸುತ್ತಿದ ಸಂಕಲ್ಪದ ಕುರುಗಳು, ವಿಶಾಲವಾದ ಬಂಡೆಯ ಹಾಸಿನ ಮೇಲೆ ಮನೆಯಾಕಾರದ ಪುಟ್ಟ ಪುಟ್ಟ ಕಲ್ಲಿನ ರಾಶಿಗಳು ಇಲ್ಲಿ ಕಾಣಬಹುದು. ಈ ಸಂಕಲ್ಪದ ಹಿಂದೆ ಪ್ರೇಮಿಗಳ ನವಜೀವನ ಹರಕೆಯಿದ್ದರೆ, ಮನೆಯಾಕಾರದ ಕಲ್ಲುಗಳು ಹಿಂದೆ ಪ್ರೇಮಿಗಳ ನವಜೀವನದ ಹರಕೆಯಿದೆ ಕಲ್ಲುಗಳ ಭವಿಷ್ಯವಿದೆ. ಚಳ್ಳಕೆರೆಯಿಂದ ಸುಮಾರು 20ಕಿಲೋ.ಮೀ.ನಾಯಕನಹಟ್ಟಿಯ ಸಮೀಪ ಹೊಸಗುಡ್ಡ ರಾಮಲಿಂಗೇಶ್ವರ ಗುವಹಾಂತರ ದೇವಲಾಯ. ಇದು ವೈಶಿಷ್ಟö್ಯಗಳ ತಾಣ ಹೌದು.. ಪ್ರೇಮಿಗಳಿಗೆ ನವಜೀವÀನ ಭರವಸೆಯ ನೀಡುವ ತಾಣವು ಹೌದು..
ನಂಬಿಕೆಯ ಕುರುವುಗಳಲ್ಲಿ ಪ್ರೀತಿಸುವ ಹೊಸ ಬದುಕಿನ ದಿಕ್ಕು ತೋರಿಸುವ ಪ್ರೀತಿಯ ಬೋಧಿವೃಕ್ಷ ವಾಗಿರುವುದು ಇಲ್ಲಿನ ವಿಶೇಷ. ಅದೆನೋ ಗೊತ್ತಿಲ್ಲ ಪ್ರೀತಿಸುವ ಯಾವುದೇ ಜೋಡಿ ಈ ತಾಣಕ್ಕೆ ಒಂದು ಬಾರಿ ಬಂದು ಮನಸಲ್ಲಿ ಸಂಕಲ್ಪ ಮಾಡಿ ಇಲ್ಲಿರುವ ಅಶ್ವತ ವೃಕ್ಷಕ್ಕೆ ಹರಕೆ ಕಟ್ಟಿದರೆ ಪ್ರೀತಿ ಸಾಕ್ಷತ್ಕಾರಾಗುತ್ತದೆ. ಮಧುವೆಯಾಗುವ ಕನಸು ಈಡೇರುತ್ತದೆ ಎಂಬ ಪ್ರತೀತಿ ಇದೆ.
ನವ ಜೋಡಿಯ ಹೊಸ ಬಾಳಿನ ಜೀವನ ಹಸಿರಾಗುತ್ತದೆ ಎಂಬ ನಂಬಿಕೆ ನಿನ್ನೆ ಮೊನ್ನೆಯದಲ್ಲ ಪುರಾತನ ಕಾಲದಿಂದಲೂ ಇದೆ. ಅದಕ್ಕೆ ಅಶ್ವತ್ ವೃಕ್ಷದಲ್ಲಿ ಜೋತಾಡುವ ಸಂಕಲ್ಪದ ಕುರುಗಳೇ ಸಾಕ್ಷಿ.. ಇಲ್ಲಿಗೆ ಕೇವಲ ಗ್ರಾಮದವರೆ ಅಲ್ಲ, ಸುತ್ತಲ್ಲಿನ ರಾಜ್ಯದ ಪ್ರೇಮಿಗಳು ಬರುತ್ತಾರೆ. ಕೇವಲ ಕರ್ನಾಟಕವಲ್ಲದೆ, ಆಂದ್ರಪ್ರದೇಶದಿAದ ಬಂದು ಪ್ರೀತಿಯನ್ನು ವ್ಯಕ್ತಿಪಡಿಸಿ ಹರಕೆ ಹೊತ್ತು ಹೋಗುತ್ತಾರೆ. ಜಾತಿ ಬೇಧವಿಲ್ಲೆದೆ ಈ ಗುಡ್ಡಕ್ಕೆ ಆಗಮಿಸುವ ನವ ಜೋಡಿಗಳಿಗೆ ಇಲ್ಲಿನ ಗುಡ್ಡ ಸ್ವಾಗತ ನೀಡುತ್ತದೆ. ಆದೇ ರೀತಿ ಇಲ್ಲಿನ ಮಂಟಪವೂ ನವ ಜೋಡಿಗಳ ಮಧುವೆಗೆ ಹಸಿರೆಲೆ ಮಂಟಪವಾಗುತ್ತದೆ. ಹೊಸಗುಡ್ಡ ರಾಮಲಿಂಗೇಶ್ವರ ದೇವಾಲಾಯ ಹೆಸರಿಗೆ ತಕ್ಕಂತೆ ಗುಡ್ಡದಲ್ಲಿ ಇದೆ. ಬೆಟ್ಟದ ತುದಿಯಲ್ಲಿ ಈ ದೇವಾಲಯ ಇರುವದರಿಂದ ಇಲ್ಲಿ ಬೀಸುವ ತಂಗಾಳಿಗೆ ಪ್ರೇಮೀಗಳು ಗಾಳಿಗೆ ಮೈಹೊಡ್ಡಿ ನಿಂತರೆ ಮೈ ಮನಸ್ಸುಗಳ ಬಿಚ್ಚು ಮಾತುಗಳು ಎಳೆ ಎಳೆಯಾಗಿ ಹೊಮ್ಮಿ ಮನಸ್ಸು ಹಗುರವಾಗುತ್ತದೆ ಆಗಾಗಿಯೇ ಇದು ಪ್ರೇಮಿಗಳ ನೆಚ್ಚಿನ ತಾಣ ಎನುತ್ತಾರೆ.
ಪರಿಸರ ಪ್ರೀಯರಿಗೂ ನೆಚ್ಚಿನ ತಾಣ:
ಹೆತ್ತರದ ಪ್ರದೇಶದಲ್ಲಿ ಇರುವುದರಿಂದ ಗಾಳಿ ಬೆಳಕು ಬೀಸುತ್ತದೆ. ಆದ್ದರಿಂದ ಕೇವಲ ಪ್ರೇಮದ ಕುರುವಾಗದೆ ನೆಚ್ಚಿನ ಪರಿಸರ ತಾಣವಾಗಿದೆ. ಇಲ್ಲಿಗೆ ಬರುವ ಪರಿಸರ ಪ್ರೀಯರಿಗೂ ಮನಸ್ಸು ಹಗುರವಾಗುತ್ತದೆ. ಪ್ರೀತಿಯ ಸಂಕಲ್ಪದಲ್ಲಿ ಹಲವು ವಿಧಾನಗಳ ಮೂಲಕ ಬಿಳಿ ವಸ್ತçವನ್ನು, ಕರ್ಚಿಪ್‌ನ್ನು ಕಟ್ಟುವುದು ಪ್ರೀತಿಯ ಸಂಕೇತವಾಗಿದೆ. ಹುಡುಗ ಹುಡುಗಿ ಯಾವುದೇ ಕುಲ ಮತ, ಬೇಧ ಭಾವ, ಜಾತಿ ಪಂಥಗಳಿಲ್ಲದೆ ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೆ ಇಲ್ಲಿ ಹರಕೆ ಹೊತ್ತು ಬರುತ್ತಾರೆ. ಹೀಗೆ ಮಾಡಿದ ಸಂಕಲ್ಪಗಳು ಈಡೇರುತ್ತಾವೆ ಎಂಬುದು ಪ್ರೇಮಿಗಳ ಬಲವಾದ ನಂಬಿಕೆ ಆದ್ದರಿಂದ ಪ್ರೇಮಿಗಳ ಕುರುಡು ಪ್ರೀತಿಯನ್ನು ಇಲ್ಲಿ ಬಿಚ್ಚಿಡುತ್ತದೆ.
ಇಲ್ಲಿನ ವಿಶಾಲವಾದ ಬಂಡೆಗಳ ಮೇಲೆ ಚಿಕ್ಕ ಚಿಕ್ಕ ಕಲ್ಲುಗಳಿಂದ ಮನೆಗಳನ್ನು ನಿರ್ಮಿಸಿದರೆ ವಸತಿ ಭಾಗ್ಯದ ಮೋಕ್ಷ ದೊರೆಯುವುತ್ತದೆ ಎಂಬುದು ಇಲ್ಲಿನ ಸುತ್ತಲ ಜನರ ನಂಬಿಕೆಯಾಗಿದೆ.
ನ್ಯೂಯಿರ್‌ಗೆ, ಹಾಗೂ ಲರ‍್ಸ್ಡೇ..ಗೆ ಪಿಕ್ಸ್ಡ್ ಮಾಡಿದ ಪ್ಲೆಸ್ :
ಇಲ್ಲಿಗೆ ಯಾವುದೇ ಜಾತಿ, ಮತ ಬೇಧ ಬಾವವಿಲ್ದೆ ಇಲ್ಲಿಗೆ ಬರುವ ಪ್ರೇಮಿಗಳು ಇಲ್ಲಿನ ದೇವಾಲಯಕ್ಕೆ ಸಾಕ್ಷಿಯಾಗುತ್ತಾರೆ. ಇಲ್ಲಿ ಜಾತಿ ಸ್ವಜಾತಿಗಳ ವಿವಾಹಕ್ಕಿಂತ ಅಂತರ್ ಜಾತಿಯ ವಿವಾಹಗಳೇ ಹೆಚ್ಚು ನಡೆಯುತ್ತವೆ. ತಂದೆ ತಾಯಿಗಳಿಂದ ಮೆಚ್ಚುಗೆ ಪಡೆದು ಈ ವಿಶಾಲ ಪರಿಸರದಲ್ಲಿ ಕೆಲವು ವಿವಾಹಗಳು ನಡೆಯುತ್ತವೆ.
ಹೇಳಿಕೆ :
ಇಂತಹ ಸ್ಥಳದಲ್ಲಿ ಪ್ರೇಮ ಹುಟ್ಟಿದ ಕುರುವಿನ ಸಾಕ್ಷಿಯಾಗಿ ಈ ಸ್ಥಳದಲ್ಲಿ ತಮ್ಮ ವಿವಾಹಕ್ಕೆ ಮುನ್ನುಡಿ ಬರೆಯುವ ಅದೇಷ್ಟೆ ಜೋಡಿಗಳು ತಮ್ಮ ಇಷ್ಟದೈವಗಳ ನಂಬಿಕೆಯಿAದ ಪ್ರತಿ ವರ್ಷವೂ ಇಲ್ಲಿಗೆ ಬಂದು ಹೋಗುವುದು ವಾಡಿಕೆಯಾಗಿದೆ, ಆದ್ದರಿಂದ ನಾವು ಕೂಡ ವರ್ಷವೂ ಈ ಸ್ಥಳಕ್ಕೆ ಬಂದು ಹೋಗುವುದು ನಮ್ಮ ಆಚಾರವಾಗಿದೆ.– ಪ್ರಿಯತಮ

ಇಲ್ಲಿ ಶ್ರಾವಣ ಮಾಸದ ಮಾರ್ಚ್, ಏಪ್ರಿಲ್, ಡಿಸೆಂಬರ್ ತಿಂಗಳಲ್ಲಿ ಲೆಕ್ಕಾ ವಿಲ್ಲದಷ್ಟು ವಿವಾಹ ನಡೆಯುತ್ತಾವೆ. ಕೆಲವು ಜೋಡಿಗಳು ವಿಶೇಷಾವಾಗಿ ಫೆಬ್ರವರಿ 14ರಂದು ಗುಡ್ಡದಲ್ಲಿ ಸಂಕಲ್ಪದ ಸ್ಥಳದಲ್ಲಿ ಸ್ವಲ್ಪಕಾಲ ಹೊತ್ತು ವಿಶ್ರಮಿಸಿ ಹೊಗುತ್ತಾರೆ.– ಸ್ಥಳಿಕರು.

Namma Challakere Local News
error: Content is protected !!