ನಾಯಕನಹಟ್ಟಿ:: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಿ ಪತ್ರಕರ್ತ ಬಿ ಟಿ ಶಿವಕುಮಾರ್. ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದ 8 ಮತ್ತು 9ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯಲ್ಲಿ ಹಟ್ಟಿಯ ಯಜಮಾನರು ಮತ್ತು ಯುವಕರು ಹಾಗೂ ಜೈ ಭೀಮ್ ಗೆಳೆಯರ ಬಳಗ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಟೇಪ್ ಕತ್ತರಿಸುವ ಮೂಲಕ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು.
ಇದೆ ವೇಳೆ ಪತ್ರಕರ್ತ ಬಿ ಟಿ ಶಿವಕುಮಾರ್ ಮಾತನಾಡಿ ಸಂವಿಧಾನವು ಕಲ್ಪಿಸಿದ ಅವಕಾಶಗಳ ಸದ್ಬಳಿಕೆ ಆಗಬೇಕು ಸಂವಿಧಾನ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಮುನ್ನ ಅದರ ಉಳಿವಿಗಾಗಿ ನಾವೇನು ಮಾಡುತ್ತಿದ್ದೇವೆ ಎಂಬುವುದು ಮುಖ್ಯವಾಗುತ್ತದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಹೋಗಿದ್ದರೆ ಹೊತ್ತಿಗೆ ಅದೆಷ್ಟು ಶೋಷಿತರು ಶಿಕ್ಷಣ ವಂಚಿತರಾಗಿ ಗುಲಾಮರಾಗಿ ಬದುಕಬೇಕಿತ್ತು ಎಂಬುದು ಉಳಿಸಿಕೊಳ್ಳಿ ಸೇವೆ ಮತ್ತು ಸ್ವಾರ್ಥ ರಹಿತ ಮನೋಭಾವದಿಂದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾದುದು ಅನ್ನಿವರ್ಯವಾಗಿದೆ ಎಂದರು.
ಇನ್ನೂ ಸೃಷ್ಟಿ ಸಂಸ್ಥೆಯ ಆರ್ ಎನ್ನಪ್ಪ ಮಾತನಾಡಿ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚನೆ ಮಾಡಿ ಸಮಾನತೆಯ ಮೂಲಭೂತ ಸೌಲಭ್ಯಗಳನ್ನು ನೀಡಿದ ಮಹಾ ಚೇತನ ಡಾ. ಬಿ ಆರ್ ಅಂಬೇಡ್ಕರ್ ರವರು ಆದರ್ಶಗಳನ್ನು ಪಾಲಿಸುವಂತಾಗಬೇಕು ಮತ್ತು ಗ್ರಾಮದ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುಸಬೇಕೆಂದು ಮನವಿಯನ್ನು ಮಾಡಿದ್ದರು.
ಇದೇ ಸಂದರ್ಭದಲ್ಲಿ ಹಟ್ಟಿಯ ಯಜಮಾನರಾದ ಗಂಗಣ್ಣ, ಪ್ರಭಣ್ಣ, ತಿಪ್ಪೇಸ್ವಾಮಿ, ಪಿ ಟಿ. ತಿಪ್ಪೇಸ್ವಾಮಿ, ಗುರುಸ್ವಾಮಿ, ಟಿ. ರಮೇಶ್, ಮುನಿಯಣ್ಣ, ಹನುಮಂತಪ್ಪ, ಶಿಕ್ಷಕರಾದ ಸದಾಶಿವಯ್ಯ, ಮುರಳಿ, ಯುವಕರಾದ ಸಂಪತ್ ,ಕೃಷ್ಣಮೂರ್ತಿ , ಬಸವರಾಜ್, ಲವ, ಶಿವರಾಜ್, ರತನ್, ಸರಿದಂತೆ ಹಟ್ಟಿಯ ಮುಖಂಡರು ಯುವಕರು ಮಹಿಳೆಯರು ಸೇರಿದಂತೆ ಮುಂತಾದವರು ಇದ್ದರು