ಚಳ್ಳಕೆರೆ ನ್ಯೂಸ್ : ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಫೆಬ್ರವರಿ 9ನೇ ತಾರೀಖನ್ನು
ಜೀತ ಪದ್ಧತಿ ರದ್ದತಿ ದಿನಾಚರಣೆ ಎಂದು ಘೋಷಿರುವ ಹಿನ್ನೆಲೆಯಲ್ಲಿ ಇಂದು ಚಳ್ಳಕೆರೆ ತಾಲೂಕಿನಲ್ಲಿ ಶಾಲಾ ಮಕ್ಕಳಿಂದ ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ಜಾಥ ಜರುಗುತು.
ಜೀತ ಪದ್ಧತಿ ಜಾಗೃತ ಜಾಥಕ್ಕೆ ಚಾಲನೆ ನೀಡಿದ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ಜೀತ ಪದ್ಧತಿ ಹಾಗೂ ವರ್ತಮಾನದಲ್ಲಿ ಮಾನವ ಕಳ್ಳಸಾಗಣಿಕೆ
ಇಂತಹ ಮಾನವ ಹಕ್ಕುಗಳು ಉಲ್ಲಂಘನೆಗಳ ಅಪರಾಧಗಳ ತಡೆಗಾಗಿ ಜೀತ ಪದ್ಧತಿ(ರದ್ದತಿ) ಕಾಯ್ದೆ ದೇಶಾದ್ಯಂತ ಜಾರಿ ಮಾಡಲಾಯಿತು.
ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಮಹತ್ವ ಉದ್ದೇಶಗಳನ್ನು
ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಅದರಂತೆ ಕ್ರಮಕೈಗೊಳ್ಳುವಂತೆ ಉಲ್ಲೇಖಿತ (1) ರ ಅಧಿಸೂಚನೆಯಲ್ಲಿ
ನಿರ್ದೇಶಿಸಿರುತ್ತಾರೆ ಎಂದರು.
ಇದೇ ಸಂಧರ್ಭದಲ್ಲಿ ಮಕ್ಕಳು ಹಾಗೂ ಅಧಿಕಾರಿಗಳು ಪ್ರತಿಜ್ಞ ವಿಧಿಯನ್ನು ಸ್ವೀಕರಿಸುವ ಮೂಲಕ ಜಯಗೋಷಗಳನ್ನು ಕೂಗಿದರು.
ಇದೇ ಸಂಧರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮಾ, ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಿಡಿಪಿಓ ಹರಿಪ್ರಸಾದ್, ಪಶು ಇಲಾಖೆ ರೇವಣ್ಣ, ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್,
ದಲಿತ ಸಂಘಟನೆ ಸಂಚಾಲಕ ಶಿವಮೂರ್ತಿ, ಹೊನ್ನುರಸ್ವಾಮಿ, ಕಚೇರಿ ಸಿಬ್ಬಂದಿ ಶ್ರೀನಿವಾಸ್, ಇತರೆ ಅಧಿಕಾರಿಗಳು ಸಿಬ್ಬಂದಿ ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಜರಿದ್ದರು.