ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ರಥಯಾತ್ರೆಯು ಇಂದು ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮಕ್ಕೆ ತಲುಪಿದೆ.
ಇನ್ನೂ ದೊಡ್ಡ ಚೆಲ್ಲೂರು ಗ್ರಾಮದ ಸುಮಂಗಳೆಯರು ಕುಂಬಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಜಾಗೃತಿ ರಥಯಾತ್ರೆಗೆ ಭವ್ಯಮೆರವಣಿಗೆಯೊಂದಿಗೆ ಈಡೀ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಇನ್ನೂ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ರಥ ಯಾತ್ರೆಯ ಉದ್ದಕ್ಕೂ ಜಯ ಘೊಷಗಳನ್ನು ಕೂಗುತ್ತಾ ಸಂವಿಧಾನದ ಅರಿವು ಕಾರ್ಯಕ್ರಮಕ್ಕೆ ಮೆರಗು ತಂದರು.
ಕಾರ್ಯಕ್ರಮದ ಯಶಸ್ವಿಗೆ ದೊಡ್ಡ ಚೆಲ್ಲೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ ಹಾಗು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ.ಅಧ್ಯಕ್ಷರು,ಉಪಾಧ್ಯಕ್ಷರು ,ಸದಸ್ಯರು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.