ಸಂವಿಧಾನ ಜಾಗೃತಿ ಜಾಥ ರಥ

.

ಚಳ್ಳಕೆರೆ ನ್ಯೂಸ್ : ಕಳೆದ ಹಲವು ದಿನಗಳಿಂದ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಚರಿಸುವ
ಸಂವಿಧಾನ ಜಾಗೃತಿ ಜಾಥಾ ರಥವು ರೇಣುಕಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ರಥವು ಸಾಗಿತು.

ಇನ್ನೂ ರಥಯಾತ್ರೆಗೆ ಪಿ ಡಿ ಓ.ಬಿಸಿ ಶಶಿರಾಜ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ‌ ಚಾಲನೆ‌ ನೀಡಿದರು.

ಸ್ಥಳೀದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ತಿಮ್ಮರಾಜ ರವರು ಬೋಧಿಸಿದರು

ಕಾರ್ಯಕ್ರಮದಲ್ಲಿ ಬಡ್ತಿ ಮುಖ್ಯ ಶಿಕ್ಷಕರಾದ ಮಂಜಣ್ಣ ಮಾತನಾಡುತ್ತಾ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸಮಾನತೆಯನ್ನು, ಸ್ವಾತಂತ್ರ್ಯವನ್ನು, ಶಿಕ್ಷಣವನ್ನು ಹಾಗೂ ನ್ಯಾಯವನ್ನು ಒದಗಿಸಿಕೊಡುವಂತಹ ಸಂವಿಧಾನ ನಮ್ಮದು ನಮ್ಮ ಸಂವಿಧಾನದ ಮೂಲ ತತ್ವ ಸಿದ್ಧಾಂತಗಳನ್ನು ,ಆಶಯಗಳನ್ನು ಕಾನೂನಿನ ಬಗ್ಗೆ ಅರಿವು ಎಲ್ಲರಲ್ಲೂ ತಿಳಿಸುವ ,ಜಾಗೃತಗೊಳಿಸುವ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು ನಮ್ಮ ಜವಾಬ್ದಾರಿಯನ್ನು ನಾವು ಮರೆಯಬಾರದು ಎಂದು ಎಲ್ಲರಲ್ಲೂ ಮನವಿ ಮಾಡಿದರು.

ಇನ್ನೂ ಮುತ್ತುರಾಜ್ ರವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಗೀತೆಗಳನ್ನು ಹಾಡುತ್ತ ಮತ್ತು ಶಾಲಾ ಮಕ್ಕಳು ಕೋಲಾಟ ನೃತ್ಯಗಳೊಂದಿಗೆ ಮೆರವಣಿಗೆ ತುಂಬಾ ಅದ್ದೂರಿಯಾಗಿ ಸಾಗಿತು

ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ‌ ಎನ್ ಅಶೋಕ್,
ಸಂಘಟನಾ ಸಂಚಾಲಕರಾದ , ಸುಮಿತ್ರ ಪಾಲ್ , ರಾಜು ಜೆ, ಪ್ರದೀಪ್ ಟಿ ,
ನವೀನ್ ಆರ್, ಪ್ರಶಾಂತ ಟಿ, ಪ್ರಭು ತಿಪ್ಪೇಸ್ವಾಮಿ, ಜಯಣ್ಣ, ನಾಗೇಶ್ ಟಿ, ಗ್ರಾಮ ಪಂಚಾಯತಿ ಅಧ್ಯಕ್ಷ ಜಾನಜ್ಜ, ಸದಸ್ಯ ರಾಮಕ್ಕ , ನರಸಿಂಹಪ್ಪ , ವೆಂಕಟೇಶ್, ದೇವಿರಮ್ಮ, ಪಾಲಕ್ಕ ,ಸೋಮಶೇಖರಪ್ಪ, ಜಗಲೂರಪ್ಪ, ಸೀನಪ್ಪ ,
ಕಾಲೇಜಿನ ಉಪನ್ಯಾಸಕರಾದ ವೆಂಕಟೇಶಲು ,ಮಾರುತಿ ,ಯರಿಸ್ವಾಮಿಪ್ರೌಢಶಾಲಾ ಶಿಕ್ಷಕ ಶ್ರೀನಿವಾಸ ಎಸ್ ,ರಾಜಣ್ಣ, ಪಾಲಯ್ಯ, ಖಾದರ್ ಸಾಬ್ ,
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಕೆಂಚರಾಜ್ ಡಿ ,ಜ್ಯೋತಿ, ಅಶ್ವಿನಿ, ಶ್ವೇತಾ, ಮಂಜಣ್ಣ ,ಭೀಮಣ್ಣ
ಅಂಗನವಾಡಿ ಶಾಲಾ ಶಿಕ್ಷಕಿಯರಾದ ,ಮಾಣಿಕ್ಯಮ್ಮ, ಜ್ಯೋತಿ ಆರ್ ನಾಗವೇಣಿ, ಅಕ್ಕಮ್ಮ ನಾಗರತ್ನಮ್ಮ ,ಶಾಂತಮ್ಮ ,ಸುನಂದಮ್ಮ , ಈಶ್ವರಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಊರಿನ ಪ್ರಮುಖ ಮುಖಂಡರುಗಳು ಶಾಲಾ ಮಕ್ಕಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!