ಚಳ್ಳಕೆರೆ ನ್ಯೂಸ್ : ಮಾರ್ಚ್ 3 ರಿಂದ 6 ರವರೆಗೆ
ಪಲ್ಸ್ ಪೊಲೀಯೋ ಕಾರ್ಯಕ್ರಮ ವಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜೀತಪದ್ಧತಿ,
ಬಾಲ್ಯವಿವಾಹ, ಹಾಗೂ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಗಳ
ಪೂರ್ವ ಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಲಿಯೊ ದಿನದಂದು ರಜೆ ಇದ್ದರೂ
ಶಾಲೆಗಳಿಗೆ ರಜೆ ನೀಡಬಾರದು ಪಲ್ಸ್ ಪೊಲೀಯೋ
ಬೂತ್ ಗಳಿಗೆ ನಿರಂತರ ವಿದ್ಯುತ್ ಅಗತ್ಯವಿರುವುದರಿಂದ ಅಂದು
ವಿದ್ಯುತ್ ವ್ಯವಸ್ಥೆ ಕೊಠಡಿಗಳ ವ್ಯವಸ್ಥೆ ಮಾಡುವಂತೆ ಇಲಾಖ ಅಧಿಕಾರಿಗಳು ಮಾಡಬೇಕು ಎಂದರು.
ಇನ್ನೂ ಬಾಲ್ಯವಿವಾಹ ಹಾಗೂ ಜೀತಪದ್ಧತಿಗೆ ಕಡಿವಾಣ ಹಾಕುವಲ್ಲಿ
ಅಧಿಕಾರಿಗಳು ಮುಂದಾಗುವಂತೆ ವಿವಾಹಗಳು ನಡೆಯುವ ಕಲ್ಯಾಣ ಮಂಟ, ದೇವಸ್ಥಾನ ಹಾಗೂ
ದರ್ಗಗಳ ಮೌಲಿಗಳನ್ನು ಕರೆಸಿ ಸಭೆ ನಡೆಸಿ ವಿವಾಹ ನಡೆಯುವ ಗಂಡ
- ಹೆಣ್ಣು 18 ವರ್ಷ ಆಗಿದೆಯೋ ಇಲ್ಲವೋ ಎಂದು ತಾಪಸಣೆ ನಡೆಸಿ
ವಿವಾಹಕ್ಕೆ ಅವಕಾಶ ನೀಡುವಂತೆ ತಿಳಿಸಬೇಕು. ಗ್ರಾಮಾಂತರ ಭಾಗದಲ್ಲಿ
ಬಾಲ್ಯವಿವಾಹ ತಡೆ ಕಾಯ್ಕೆ ಬಗ್ಗೆ ಹೆಚ್ಚು ಅರಿವು ಜಾಗೃತಿ ಮೂಡಿಸಬೇಕು
ಎಂದು ತಿಳಿಸಿದರು.
ಶಿಶುಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್ ಮಾತನಾಡಿ
ಬೇಟಿ ಪಚಾವೋ ಬೇಟಿ ಪಢಾವೋ ಯೋಜನೆಯಡಿಯಲ್ಲಿ
ಹೆಣ್ಣುಮಕ್ಕಳ ಸಮಾನತೆ ಹೆಣ್ಣು ಮಕ್ಕಳನ್ನು ಉಳಿಸಿ ಶಿಕ್ಷಣ ಕೊಡಿಸುವಂತೆ ಜಾಗೃತಿ ಹಾಗೂ ಹೆಣ್ಣು ಮಕ್ಕಳಿಗೆ ಸರಕಾರದಿಂದ
ಬರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವುದು ಮೂಡಿಸಲಾಗುವುದು, ಈಗಾಗಲೆ
ಆರೋಗ್ಯ ಇಲಾಖೆ ಹಾಗೂ ಶಿಶುಅಭಿವೃದ್ಧಿ ಇಲಾಖೆ ಜಂಟಿಯಾಗಿ
ಬಾಲ್ಯವಿವಾಹ ಮಾಡಿಕೊಂಡಿರುವ ಪ್ರಕತಣಗಳನ್ನು ಪತ್ತೆ ಮಾಡಿ
ಪೋಕ್ಸ್ ಕಾಯ್ದೆಯಡಿ ಪ್ರಕಣ ದಾಖಲು ಮಾಡಿಕೊಳ್ಳಲಾಗಿದೆ.
ಹೆಚ್ಚು ಬಾಲ್ಯ ವಿವಾಹವಾದ ಗ್ರಾಮಗಳಲ್ಲಿ ಬಾಲ್ಯವಿವಾಹದ ಬಗ್ಗೆ
ಅರಿವು ಮೂಡಿಸಲು ಆಶಾ, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ
ಜಾಥ ಕಾರ್ಯಕ್ರಮ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುವು
ಎಂದು ತಿಳಿಸಿದರು.
ಕಾರ್ಮೀಕ ನಿರೀಕ್ಷಕಿ ಕುಸುಮ ಮಾತನಾಡಿ ತಾಲೂಕಿನಲ್ಲಿ ಜೀತ
ಕಾರ್ಮಿಕ ಪದ್ಧತಿ ಬಗ್ಗೆ ಜನರಲ್ಲಿ ಅರಿವುದು ಮೂಡಲು ಜಾಥ
ಹಮ್ಮಿಕೊಳ್ಳಲಾಗುವುದು ಎಲ್ಲಾ ಇಲಾಖೆ ಅಧಿಕಾರಿಗಳ ಸಹಕಾರ
ಅಗತ್ಯ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಚಂದ್ರಪ್ಪ, ಪಟ್ಟಣ ಪಂಚಾಯಿತಿ
ಪೌರಾಯುಕ್ತ ಪಾಲಯ್ಯ, ಪಶುಸಂಗೋಪನೆ ಸಹಾಯಕ ನಿರ್ದೇಶಕ
ಡಾ,ರೇವಣ್ಣ, ಉಪನೊಂದಣಾಧಿಕಾರಿ ಭಾಗ್ಯಮ್ಮ, ಶಿಕ್ಷಣ ಇಲಾಖೆ
ಮಾರುತಿಬಂಡಾರಿ,ತಾಲೂಕು ವೈದ್ಯಾಧಿಕಾರಿ ಡಾ.ಕಾಶಿ, ಆರೋಗ್ಯ ಇಲಾಖೆ ಎಸ್ ಒ ತಿಪ್ಪೇಸ್ವಾಮಿ,
ಇತರರಿದ್ದರು.