ಫೆ. ೧೩ರ ನಾಯಕನಹಟ್ಟಿ ಬಂದ್ ಗೆ ಪಟ್ಟಣದ ಮತ್ತು ಹೋಬಳಿಯ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಬೆಂಬಲವನ್ನು ನೀಡುವಂತೆ ನಾಯಕನಹಟ್ಟಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮನವಿ
ಚಳ್ಳಕೆರೆ ನ್ಯೂಸ್:: ಭದ್ರಾ ಮೇಲ್ದಂಡೆ ಯೋಜನೆ ಈ ಭಾಗದ ಜನರಿಗೆ ಮತ್ತು ಚಿತ್ರದುರ್ಗ ಜಿಲ್ಲೆಗೆ ಕನಸಿನ ಕೂಸಾಗಿ ಉಳಿದಿದೆ ಕನಸನ್ನು ನನಸು ಮಾಡಲು ಫೆ .೧೩ರ ನಾಯಕನಹಟ್ಟಿ ಬಂದ್ ಗೆ ಪಟ್ಟಣದ ಗ್ರಾಮಸ್ಥರು ಸಂಘ ಸಂಸ್ಥೆಗಳು ಮತ್ತು ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರು ರೈತರು ಬಂದ್ ಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ .
ಗುರುವಾರ ಪಟ್ಟಣದ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ಪಟ್ಟಣದ ಎಲ್ಲಾ ಸಮುದಾಯದವರ ಮತ್ತು ಸಂಘ ಸಂಸ್ಥೆಗಳ ಹಾಗೂ ಹೋಬಳಿ ವಿವಿಧ ಹಳ್ಳಿಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ.
ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಆಗುತ್ತಿರುವುದು ತುಂಬಾ ವಿಪರ್ಯಾಸ ನಮ್ಮ ಹೋಬಳಿಯಲ್ಲಿ ಸಾಕಷ್ಟು ಕೆರೆಗಳಿವೆ ಆ ಕೆರೆಗಳಿಗೆ ನೀರು ಹರಿಸುವಂತ ಕೆಲಸವನ್ನು ಮಾಡಬೇಕಾಗಿದೆ. ನಮ್ಮ ಚಿತ್ರದುರ್ಗ ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು ಕೆರೆಗಳಿಗೆ ನೀರು ತಂದರೆ ಮಾತ್ರ ರೈತರಿಗೆ ಅನುಕೂಲವಾಗಿತ್ತದೆ. ೬ ಜನ ಶಾಸಕರನ್ನು ಒಬ್ಬ ಮಂತ್ರಿಯ ವಿಶ್ವಾಸವನ್ನು ತೆಗೆದುಕೊಂಡು ಹೋಗಿ ವಿಧಾನಸೌಧದ ಮುಂಭಾಗದಲ್ಲಿ ಹೋರಾಟ ಮಾಡಿದರೆ ನಮ್ಮ ಕೂಗು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ಹೋಗುತ್ತದೆ ಎಂದರು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿ ನಮ್ಮ ಹೋಬಳಿಯ ಕೆರೆಗಳಲ್ಲಿ ನೀರಿಲ್ಲದೆ ನಾವು ಜೀವನ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ ಪಕ್ಕದ ಜಗಳೂರು ತಾಲ್ಲೂಕಿನ ಕೆರೆಗಳಿಗೆ ನೀರು ಬಂದಿವೆ, ನಮ್ಮ ಕೆರೆಗಳಿಗೆ ನೀರು ಬಂದರೆ ಮಾತ್ರ ಅಂತರ್ಜಲ ಹೆಚ್ಚಾಗುತ್ತದೆ. ಸಿರಿಗೆರೆ ಸ್ವಾಮೀಜಿ ಮತ್ತು ಶಾಸಕರÀನ್ನು ಕರೆಸಿ ಹೋರಾಟ ಮಾಡಿದರೆ ಮಾತ್ರ ನಮ್ಮ ಕೆರೆಗಳಿಗೆ ನೀರು ಬರಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ತಿಪ್ಪೇಸ್ವಾಮಿ, ಪೆದ್ದನಓಬಯ್ಯ (ದಾಸ್), ಮುಖಂಡ ಪ್ರಭುಸ್ವಾಮಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ ಎಂ ಶಿವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಹೋಬಳಿ ಅಧ್ಯಕ್ಷ ಮಲ್ಲೂರಹಳ್ಳಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಹಾಲಿ ಸದಸ್ಯ ಬಿ.ಕಾಟಯ್ಯ, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ನಾಯಕನಹಟ್ಟಿ ನೀರಾವರಿ ಮತ್ತು ಹೋರಾಟ ಸಮಿತಿ ಕಾರ್ಯಧ್ಯಕ್ಷ ಎಸ್ ಟಿ ಬೋರ್ ಸ್ವಾಮಿ, ಉಪಾಧ್ಯಕ್ಷ ಆರ್ ಬಸವರಾಜ್, ಗೌಡಗೆರೆ ಮಂಜುನಾಥ್, ಕಾರ್ಯದರ್ಶಿ ಜೋಗಿಹಟ್ಟಿ ಎಚ್ ಬಿ.ತಿಪ್ಪೇಸ್ವಾಮಿ, ನೀರಾವರಿ ಹೋರಾಟ ಸಮಿತಿಯ ಸದಸ್ಯರು ಸೇರಿದಂತೆ ಸದಸ್ಯರು, ಪೊಲೀಸ್ ಪೇದೆ ಅಣ್ಣಪ್ಪ ಇದ್ದರು.