ನಾಯಕನಹಟ್ಟಿ : ಶ್ರೀ ದೊಡ್ಲ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಐತಿಹಾಸಿಕ ಜಾತ್ರೆಯಾಗಿದ್ದು ಪ್ರತಿ ಐದು ವರ್ಷಕ್ಕೊಮ್ಮೆ ನಾಯಕನಹಟ್ಟಿಯಲ್ಲಿ ಜಾತ್ರೆ ಮಹೋತ್ಸವ ನಡೆಯುತ್ತದೆ.
ನಾಯಕನಹಟ್ಟಿ ಗ್ರಾಮವು ಸಂಭ್ರಮ ಮತ್ತು ಸಡಗರದಿಂದ ಭಕ್ತಾದಿಗಳು ಆಚರಿಸುತ್ತಿದ್ದಾರೆ. ದೇವಿಯ ದೇವಸ್ಥಾನವನ್ನು ಹಸಿರು ತಳಿರು ತೋರಣ ಮತ್ತು ಹೂವಿನ ಮಾಲೆಗಳಿಂದ ಅಲಂಕರಿಸಲಾಗಿದೆ.
ಊರಿನ ಮುಖ್ಯ ರಸ್ತೆಗಳ ಅಕ್ಕ ಪಕ್ಕ ರಸ್ತೆ ಬದಿಯಲ್ಲಿ ವಿದ್ಯುತ್ ದ್ವೀಪಗಳಿಂದ ಅಲಂಕರಿಸಿದೆ.
30/01/2024 ಮಂಗಳವಾರ ದಿನದಂದು ಶ್ರೀ ದೊಡ್ಲ ಮಾರಮ್ಮ ದೇವಿಯು ಎನ್ ದೇವರಹಳ್ಳಿ ಗ್ರಾಮದಿಂದ ನಾಯಕನಹಟ್ಟಿಗೆ ಸಕಲ ಬಿರುದಾವಳಿಯಿಂದ ಆಗಮಿಸಿ ದಿನಾಂಕ 31/01/2024 ರ ಕಾಸು,ಮೀಸಲು, ಹರಕೆ ಸಲ್ಲಿಸುವುದು.
ನಂತರ ಗುರುವಾರ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆಯೊಂದಿಗೆ ನಾಯಕನಹಟ್ಟಿಯಿಂದ ಬೀಳ್ಕೊಟ್ಟು ಎನ್ ದೇವರಹಳ್ಳಿಯ ಸ್ವಸ್ಥಾನಕ್ಕೆ ಸೇರಿಸಲಾಗುವುದು.
ಸಕಲ ಭಕ್ತಾದಿಗಳು ದೇವಿಯ ಕೃಪೆಗೆ ಪಾತ್ರರಾಗಲು ಎನ್ ದೇವರಹಳ್ಳಿ ಶ್ರೀ ದೊಡ್ಲ ಮಾರಮ್ಮ ದೇವಸ್ಥಾನದ ಸೇವಾ ಸಮಿತಿ ಮತ್ತು ನಾಯಕನಹಟ್ಟಿ ಗ್ರಾಮಸ್ಥರು ಸಮಸ್ತ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು