ಚಳ್ಳಕೆರೆ::ಜ.30. ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ ಆದರೆ ಇಂದು ಅಸಹಾಯಕರಿಗೆ ನಿರ್ಗತಿಕರಿಗೆ ಈ ಕನಸನ್ನು ನೆನೆಸು ಮಾಡಲು ಸಾಧ್ಯವಾಗದ ಮಾತು ಇಂಥವರ ಆಸೆ ಈಡೇರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆ ಹಾಗೂ ಹೇಮಾವತಿ ಹೆಗಡೆ ಹಾಕಿಕೊಟ್ಟಿರುವ ಕಾರ್ಯಕ್ರಮವೇ ವಾತ್ಸಲ್ಯ ಕಾರ್ಯಕ್ರಮ.
ಹೌದು ತಾಲೂಕಿನ ಪರಶುರಾಮಪುರ ವಲಯದ ಸೂರನಹಳ್ಳಿ ಕಾರ್ಯಕ್ಷೇತ್ರದ ಮಾತೃಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಜ್ಜಪ್ಪ ಮತ್ತು ಗೌರಮ್ಮ ದಂಪತಿಗಳ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಅವರು ಉದ್ಘಾಟನೆ ಮಾಡಿ ಸೂರಿಲ್ಲದ ಅಸಹಾಯಕರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆಯನ್ನು ಕಟ್ಟಿಕೊಡುವ ಕಾರ್ಯವನ್ನು ಪೂಜ್ಯಖಾವಂದರು ಹಾಗೂ ಮಾತೃಶ್ರೀ ಅಮ್ಮನವರು ವಾತ್ಸಲ್ಯ ಮನೆ ರಚನೆ ಮಾಡುತ್ತಿದ್ದು ಆಸರೆಯಾಗಿದ್ದಾರೆ.
ಗ್ರಾಮದ ಗೌರಮ್ಮ ಮತ್ತು ಬಜ್ಜಪ್ಪ ನವರಿಗೆ ಶುಭ ಹಾರೈಸಿದರು.
ಇದೆ ವೇಳೆ ಜಿಲ್ಲಾ ನಿರ್ದೇಶಕರು ಹಾಗೂ ಮಾನ್ಯ ತಾಲೂಕಿನ ಯೋಜನಾಧಿಕಾರಿಗಳು ಶಶಿಕಲಾ, ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ಸರ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ,
ಪರಶುರಾಂಪುರ ವಲಯ ಮೇಲ್ವಿಚಾರಕ ಮಂಜುನಾಥ್ , ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಧಿಕಾರಿ ಶ್ರೀಮತಿ ಭವಾನಿ, ಸೇವಾ ಪ್ರತಿನಿಧಿ ಹೇಮಲತಾ,ವಿಎಲ್ಇ ಕಾವ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.