ಚಳ್ಳಕೆರೆ : ಮಗುವಿನ ಮೇಲೆ ಪೋಷಕರು ಒತ್ತಡ ಹೇರಬಾರದು, ಮಗುವಿನ ಅಭಿವ್ಯಕ್ತಿಯ ಮೇಲೆ ಶಿಕ್ಷಣ ನೀಡಬೇಕು ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು.

ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡು 2023-24 ನೇ ಸಾಲಿನ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ವೃದ್ದಶ್ರಮಗಳು ಹುಟ್ಟಿಕೊಳ್ಳುತ್ತಿರುವುದು ವಿಷಾಧನೀಯ, ಆದ್ದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ ಅವರಿಗೆ ಅಭಿರುಚಿಗೆ ತಕ್ಕಂತೆ ಶಿಕ್ಷಣ ‌ನೀಡಬೇಕು, ಇಂದಿನ ಕಾಲದಲ್ಲಿ ಸಂಸ್ಕೃತಿ ಒಳಗೊಂಡ ಶಿಕ್ಷಣ ನೀಡಬೇಕು, ಜೀವನದಲ್ಲಿ ಎಲ್ಲಾರಿಗೂ ಒಂದಲ್ಲ ಒಂದು ರೀತಿಯಲ್ಲಿ ಜಿಗುಪ್ಸೆ ಇರುತ್ತೆ ಆದರೆ ಆದರೆ ಅದನ್ನು ಮೆಟ್ಟಿ‌ನಿಂತು ಸಾಧನೆಯ ಹಾದಿಯಲ್ಲಿ ಯಾರು ನಡೆಯುತ್ತಾರೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದರು.

ಕನ್ನಡ ಭಾಷ ಪರೀಕ್ಷಕರಾದ ಶಿವಣ್ಣ ಮಾತನಾಡಿ, ಮಗುವಿನ ಮಾನಸೀಕ ವಿಕಸನಕ್ಕೆ ತಕ್ಕಂತೆ ಶಿಕ್ಷಕರು ಭೋಧನೆ ಕೈಗೊಳ್ಳಬೇಕು, ಶಾಲೆಯ ಪರಿಸರ ಮಗುವಿನ ವಿಕಸನಕ್ಕೆ ಹಿಂಬು ನೀಡುತ್ತದೆ, ಇನ್ನೂ ಉತ್ತಮ ಸಮಾಜದಲ್ಲಿ ಉತ್ತಮ ನಾಗರೀಕನನನ್ನಾಗಿ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕು, ಇದರಿಂದಾಗಿ ‌ಮಕ್ಕಳ ಮೇಲೆ ಒತ್ತಡ ಏರದೆ, ಅವರ ಜೀವನ ಉಜ್ವಲಗೊಳಿಸಬೇಕು, ಮಗುವಿನ ಮನಸ್ಸಿನಲ್ಲಿ ಹುದುಗಿರವ ಪ್ರತಿಭೆಯನ್ನು ಹೊರ ತೆಗೆಯಬೇಕು, ಅಂತಹ ಶಿಕ್ಷಣ ಈಗೀನ ಕಾಲದಲ್ಲಿ ನೀಡಬೇಕು ಎಂದರು.

ಇದೇ ಸಂಧರ್ಭದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆಯಲು ಸಹಕರಿಸಿದ ಶಿಕ್ಷಕರಿಗೆ ಹೊಂಗಿರಣ ಶಿಕ್ಷಣ ಸಂಸ್ಥೆಯಿಂದ ಶಿಕ್ಷಕರಾದ ಶೈಲಜಾ, ಹಾಗೂ ಸಿದ್ದೇಶ ರವರಿಗೆ ಅಭಿನಂದಿಸಿ ಸನ್ಮಾನಿಸಿದರು.

ಇದೇ ಸಂಧರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ, ಅಧ್ಯಕ್ಷರಾದ ರಾಜೇಶ್ ಗುಪ್ತ, ಉಪಾಧ್ಯಕ್ಷ ಮಧುಸೂದನ್, ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ನಿರ್ದೇಶಕ ಶಿವುಪ್ರಸಾದ್, ಜಯಚಂದ್ರ, ಯಾದಲಗಟ್ಟೆ ಜಗನ್ನಾಥ್, ಗಂಗಾಧರ್, ಮಹಾದೇವ, ಮುಖ್ಯ‌ಶಿಕ್ಷಕ ಡಿವಿಎಸ್ ಪ್ರಸಾದ್, ಶೈಲಜಾ, ಶೋಭಾ, ಇತರ ಶಿಕ್ಷಕರು ಹಾಗೂ ಮಕ್ಕಳ ಪೋಷಕರು ಮಕ್ಕಳು ಹಾಗೂ ಇತರರು ಇದ್ದರು.

Namma Challakere Local News
error: Content is protected !!