ಚಿತ್ರದುರ್ಗ : ನಾಳೆ
ನಡೆಯಲಿರುವ ಶೋಷಿತ ಸಮುದಾಯಗಳ ಬೃಹತ್
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ
ಸಚಿವರುಗಳು ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ
ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು
ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆಎಂ
ರಾಮಚಂದ್ರಪ್ಪ ತಿಳಿಸಿದರು.

ನಗರದ ಹೊರವಲಯದ ಸಮಾವೇಶ ನಡೆಯುವ ಸ್ಥಳದಲ್ಲಿ
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು
ಸಮಾವೇಶದಲ್ಲಿ ಸಿಎಂ ಡಿಸಿಎಂ, ಶೋಷಿತ ಸಮುದಾಯದ
ಹಾಲಿ, ಮಾಜಿ ಸಚಿವರು, ಶಾಸಕರು ಸೇರಿದಂತೆ ರಾಜ್ಯದ
ಪ್ರತೀ ಮೂಲೆ ಮೂಲೆಗಳಿಂದ ಜನತೆ, 10 ಸಾವಿರಕ್ಕೂ ಹೆಚ್ಚು
ವಾಹನಗಳಲ್ಲಿ ಜನ ಬರುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, 3 ಲಕ್ಷ
ಜನತೆಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ವೇದಿಕೆ
ಮೇಲೆ 200 ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದ್ದು, 3
ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ.
ಸಮಾವೇಶಕ್ಕೆ ಬರುವವರಿಗೆ ವೆಜ್ ಮತ್ತು ನಾನ್ ವೆಜ್
ಊಟ ಸಿದ್ಧಪಡಿಸಲಾಗುತ್ತಿದೆ.
ಈ ಸಮಾವೇಶದ ತರುವಾಯ ಶೋಷಿತರು ನಿರ್ಣಯ,
ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.

ಶೋಷಿತ
ಸಮುದಾಯದ ಜನರಲ್ಲಿ ಜಾಗೃತಿ ಇಲ್ಲ, ಮೇಲ್ವರ್ಗದ ಜನರ
ಗುಲಾಮಗಿರಿಗೆ ಒಳಗಾಗಿದ್ದಾರೆ. ಶೋಷಿತರನ್ನು
ಗುಲಾಮಗಿರಿಯಿಂದ ಹೊರತರಬೇಕಾಗಿದೆ ಎಂದರು.

ಎಂಪಿ ಚುನಾವಣೆಗೆ ಪ್ರತಿಕ್ರಿಯೆ : ಲೋಕಸಭಾ ಚುನಾವಣೆ
ದೃಷ್ಟಿಯಿಂದ ಈ ಸಮಾವೇಶ ಆಯೋಜನೆ ಮಾಡಲಾಗಿದೆ
ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ
ಕೆಲವರು ತಾವೇ ಸರಕಾರ ಮಾಡುವುದಾಗಿ ಹೇಳಿದ್ರು,
ರಾಜ್ಯದಲ್ಲಿ ನಾವೂ ಇದೀವಿ ಅಂತಾ ಅವರಿಗೆ
ತೋರಿಸಬೇಕು.

ಜಾತಿ ಜನಗಣತಿ ವರದಿ ಜಾರಿ ಮುಖ್ಯ ಉದ್ದೇಶ ನಮ್ಮಜಾತಿ
ಸದಸ್ಯರ ಸಂಖ್ಯೆ ನಿಖರವಾಗಿ ನಮಗೆ ಗೊತ್ತಾಗಬೇಕು.
ಹಾಗಾಗಿ ಕಾಂತರಾಜ ವರದಿ ತ್ವರಿತವಾಗಿ ಜಾರಿ ಆಗಬೇಕು
ಎಂದರು. ಸಮಾವೇಶ ಮೂಲಕ ಜಾರಿ ಆಗಬೇಕು ಅಂತಾ
ಒತ್ತಡ ಹಾಕಲಾಗುವುದು. ದೇಶದಲ್ಲಿ ಸಂಪತ್ತು ಕೆಲವೇ
ಕೆಲವು ಮೇಲ್ದಾತಿಗಳಿಗೆ ಜಾತಿಗೆ ಸೀಮಿತವಾಗಿದೆ.
ಕಾಂತರಾಜ್ ವರದಿ ಜಾರಿಯಾದರೆ ಕೆಲವರಿ ಯಾಕೆ
ನೋವು..? ಕಾಂತರಾಜ್ ವರದಿ ಜಾರಿ ಆಗಲೇಬೇಕು ಅಂತಾ
ಒತ್ತಾಯ ಮಾಡ್ತೀವಿ ಎಂದರು.

ಕೆಲವರು ಕಾಂತರಾಜ್ ವರದಿ ಕಳುವಾಗಿದೆ ಅಂತಿದಾರೆ.
ಮಾಜಿ ಸಿಎಂ ಒಬ್ಬರು ಕಳುವಾಗಿದೆ ಅಂತಾ ಹೇಳಿದ್ದಾರೆ.
ಆದ್ರೆ ನಮಗೆ ಅವರ ಮೇಲೇ ಸಂಶಯ ಇದೆ. ಎಲ್ಲಾ ಪಕ್ಷಗಳ
ನಾಯಕರಿಗೂ ಸಮಾವೇಶಕ್ಕೆ ಆಹ್ವಾನ ಕೊಟ್ಟಿದೀವಿ, ಆದ್ರೆ
ಅವರಿಗೆ ಬರೋಕೆ ಭಯ ಇರಬಹುದು
ವಿರೋಧ ಪಕ್ಷದವರೆಲ್ಲ ನಾವೂ ಬೆಂಬಲ ಕೊಡ್ತೀವಿ
ಅಂದಿದ್ದಾರೆ. ನಾವು ಯಾವುದೇ ರಾಜಕೀಯ ಪಕ್ಷಗಳಿಗೆ
ಅಂಟಿಕೊಂಡಿಲ್ಲ. ಸಂಘಟನೆಗಳಿಂದ ನಾವಿಂದು ಹೋರಾಟ
ಮಾಡುತ್ತಿದ್ದೇವೆ ಎಂದರು.
ಚುನಾವಣೆಗೂ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ,
ಈಗಾಗಲೇ ರಾಜ್ಯಾದ್ಯಂತ ಓಡಾಡಿ ಶೋಷಿತರ ಸಂಘಟನೆ
ಬಲಪಡಿಸಿದ್ದೇವೆ, ಸರ್ಕಾರದ ಸಂಪುಟ ಸಹೋದ್ಯೋಗಿಗಳು
ವರದಿ ಸ್ವೀಕಾರದ ಬಗ್ಗೆ ನಕಾರ ಮಾಡ್ತಿದ್ದಾರೆ. ಹಾಗಾಗಿ
ಅವರಿಗೂ ಚುರುಕು ಮುಟ್ಟಿಸಲು ಈ ಸಮಾವೇಶ
ಹಮ್ಮಿಕೊಳ್ಳಲಾಗಿದೆ.ಒಂದು ವೇಳೆ ವರದಿ ಸ್ವೀಕಾರಕ್ಕೆ ಇಷ್ಟ
ಇರದಿದ್ರೆ ಸಮಾವೇಶದಲ್ಲಿ ಸ್ಪಷ್ಟಪಡಿಸಲಿ ಎಂದು
ಆಗ್ರಹಿಸಿದರು.

ಕೋಟ್.:

ರಾಜ್ಯದ ಮುಖ್ಯಮಂತ್ರಿಗಳಾದ
ಸಿದ್ದರಾಮಯ್ಯ ಅವರು ನಾಳೆ ನಡೆಯುವ ಜ. 28 ರಂದು ಚಿತ್ರದುರ್ಗ ಜಿಲ್ಲಾ
ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್
ಮೂಲಕ ಹೊರಟು ಬೆಳಿಗ್ಗೆ 11 ಗಂಟೆಗೆ ನಗರದ ಎಸ್.ಜೆ.ಎಂ.
ಆಂಗ್ಲ ಮಾಧ್ಯಮ ಶಾಲಾ ಆವರಣ ಪಕ್ಕದ ಹೆಲಿಪ್ಯಾಡ್‌ಗೆ
ಆಗಮಿಸುವರು. ಬಳಿಕ ಶಿವಶರಣ ಮಾದಾರ ಚನ್ನಯ್ಯ
ಗುರುಪೀಠಕ್ಕೆ ಭೇಟಿ ನೀಡುವರು.
ನಂತರ ಬಳಿಕ ನಗರದ ಹೊರವಲಯದಲ್ಲಿರುವ ಶ್ರೀ
ಬಸವಮೂರ್ತಿ ಮಾದಾರ ಚೆನ್ನಯ್ಯ ಪೀಠದ ಪಕ್ಕದ
ಮೈದಾನದಲ್ಲಿ ಕರ್ನಾಟಕ ಶೋಷಿತ ಮಹಾ ಒಕ್ಕೂಟ ಮತ್ತು
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ
ಸಂಯುಕ್ತ ಆಶ್ರಯದ “ಶೋಷಿತ ಜಾಗೃತಿ ಸಮಾವೇಶ” ದಲ್ಲಿ
ಭಾಗವಹಿಸುವರು.

ಇನ್ನೂ ಕಲ್ಲಿನ‌ಕೋಟೆಯ ಐದು ಶಾಸಕರು ಇದರ ಸಭೆಗೆ ಭಾಗವಹಿಸಲಿದ್ದು ಅದರಲ್ಲಿ ವಿಶೇಷವಾಗಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರು ಕಳೆದ ಮೂರು ಬಾರಿ ಕ್ಷೇತ್ರದಲ್ಲಿ ಸಮಾವೇಶಕ್ಕೆ ಬರಲು ಪೂರ್ವ ಭಾವಿ ಸಭೆಗಳನ್ನು ಮಾಡಿದ್ದು , ಜನರ ಕಲ್ಯಾಣಕ್ಕೆ ಕಟಿಬದ್ದರಾಗಿ ನಾಳೆ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Namma Challakere Local News
error: Content is protected !!