ಚಳ್ಳಕೆರೆ : 75ನೇ ಗಣರಾಜ್ಯೋತ್ಸವಕ್ಕೆ ನೂತನ ಶಾಸಕರುಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಕೊಡುಗೆ ನೀಡಿದ ರಾಜ್ಯ ಇಂದು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಅದರಂತೆ
ರಾಜ್ಯ ಸರ್ಕಾರ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶವನ್ನು
ಹೊರಡಿಸಿದೆ.
ಅದರಲ್ಲಿ ಕಲ್ಲಿನಕೋಟೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನುನಿಗಮ
ಮಂಡಳಿಗೆ ಆಯ್ಕೆ ಮಾಡಲಾಗಿದೆ. ಹೊಸದುರ್ಗದ ಹಿರಿಯ ಶಾಸಕ ಬಿಜಿ
ಗೋವಿಂದಪ್ಪ ಹಾಗು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಪಡೆದ ಹಿರಿಯ ಶಾಸಕ ಟಿ. ರಘುಮೂರ್ತಿ
ಅವರುಗಳನ್ನು ಕ್ರಮವಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ
ಅಧ್ಯಕ್ಷರಾಗಿ ಬಿಜಿ ಗೋವಿಂದಪ್ಪ ಮತ್ತು ರಾಜ್ಯ ಕೈಗಾರಿಕಾ ಮಂಡಳಿ ಅಧ್ಯಕ್ಷರಾಗಿ
ಟಿ. ರಘುಮೂರ್ತಿ ಅವರನ್ನು ನೇಮಿಸಿದೆ.
ಅಧಿಕಾರ ಸ್ವೀಕರಿಸಲ್ಲ:
ಆಯ್ಕೆ ಮಾಡಿದ
ನಿಗಮ ಮಂಡಳಿ ಸ್ಥಾನಗಳಿಗೆ ನಮ್ಮನ್ನು
ಪರಿಗಣಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ
ಶಿವಕುಮಾರ್ ಅವರಿಗೆ ಮನವಿ ಮಾಡಿ ಪತ್ರ ಬರೆಯಲಾಗಿತ್ತು. ಆದರೆ ನಿಗಮ
ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಹೆಸರು ಆಯ್ಕೆ ಮಾಡಿದ್ದಾರೆ. ಅಧಿಕಾರ ಸ್ವೀಕಾರ
ಮಾಡಿಲ್ಲ, ಮಾಡುವ ಮುನ್ನ ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಿ ನಂತರ
ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಗೋವಿಂದಪ್ಪ ಹೇಳಿದರೆ,
ಚಳ್ಳಕೆರೆ
ಶಾಸಕ ಟಿ. ರಘುಮೂರ್ತಿ ನಾನೂ ಕೂಡ ನಿಗಮ ಮಂಡಳಿಗೆ ಹೆಸರು
ಪರಿಗಣಿಸಬಾರದು ಎಂದು ಪತ್ರದಲ್ಲಿ ತಿಳಿಸಿದ್ದರೂ ಮತ್ತೆ ಆಯ್ಕೆ ಮಾಡಿದ್ದಾರೆ.
ಆದರೆ ನಾನು ಸಿಎಂ ಮತ್ತು ಡಿಸಿಎಂ ಜೊತೆಗೆ ಒಂದು ಸುತ್ತಿನ ಮಾತುಕತೆ ಮುಗಿದ ಮೇಲೆ ತಿರ್ಮಾನ ಮಾಡುತ್ತೇನೆ.