ಚಳ್ಳಕೆರೆ-26 ಪ್ರತಿವರ್ಷದಂತೆ ಈ ವರ್ಷವೂ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಫೆ.1ರಂದು ನಡೆಸಲು ಉದ್ದೇಶಿಸಿದ್ದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಾಲ್ಲೂಕು ಆಡಳಿತ ಮತ್ತು ಸಮುದಾಯದ ಮುಖಂಡರೊಂದಿಗೆ ಚರ್ಚಿಸಲು ಜ.29ರ ಸೋಮವಾರ ಮಧ್ಯಾಹ್ನ 4ಕ್ಕೆ ತಾಲ್ಲೂಕು ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ತಹಶೀಲ್ಧಾರ್ ರೇಹಾನ್‍ಪಾಷ ತಿಳಿಸಿದ್ಧಾರೆ.
ಮಡಿವಾಳ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿರುವ ಪೂರ್ವಭಾವಿ ಸಭೆಗೆ ಮಡಿವಾಳ ಸಮಾಜದ ಎಲ್ಲಾ ಹಂತದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವಂತೆ ಅಧ್ಯಕ್ಷ ಎನ್.ಮಂಜುನಾಥ, ಗೌರವಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಕಾರ್ಯದರ್ಶಿ ಕುಶಾಲಪ್ಪ ಮನವಿ ಮಾಡಿದ್ಧಾರೆ.