ನಾಯಕನಹಟ್ಟಿ :: ದೇಶದಾದ್ಯಂತ 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಲಗೇತನಹಟ್ಟಿಯಲ್ಲಿ ಕೂಡ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ ಎಂದು ಗ್ರಾ. ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ ಹೇಳಿದ್ದಾರೆ.

ಶುಕ್ರವಾರ ಸಮೀಪದ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ವತಿಯಿಂದ 75ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು 1950 ರ ಜನವರಿ 26ರಂದು ಸಂವಿಧಾನವನ್ನ ಜಾರಿಗೆ ತರಲಾಯಿತು. ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ಇಡೀ ವಿಶ್ವವೇ ಮುಚ್ಚುವಂಥ ಸಂವಿಧಾನವನ್ನು ಜಾರಿಗೆ ಬಂದ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ ಸ್ವಾತಂತ್ರ ಸಂಸ್ಕೃತಿ ಶಿಕ್ಷಣ ಮತ್ತು ಇತರ ಹಕ್ಕುಗಳನ್ನು ನೀಡಿದ ಕೀರ್ತಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸೇರಿದಂತೆ ಸ್ವಾತಂತ್ರಕ್ಕೆ ಹಾಗೂ ಸಂವಿಧಾನ ರಚಿಸಲು ಶ್ರಮಿಸಿದ ಎಲ್ಲಾ ಹೋರಾಟಗಾರರನ್ನು ಸ್ಮರಿಸುವ ದಿನವಾಗಿದೆ ಎಂದರು.

ಇದೇ ವೇಳೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ ವಿಶ್ವನಾಥ್ ಮಾತನಾಡಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ದೇಶದಲ್ಲಿ ಸಂಸ್ಕೃತಿ ನಾಡು ನುಡಿ ವಿವಿಧ ಭಾಷೆಯ ಎಲ್ಲವನ್ನ ಒಳಗೊಂಡ ದೇಶ ಭಾರತ ನಮ್ಮ ದೇಶ ವಿಕಾಸದ ಆದಿಯಲ್ಲಿ ಸಾಗುತ್ತದೆ ಡಾ. ಬಿಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಬಹುದೊಡ್ಡ ಕೊಡುಗೆಯಾಗಿ ಸಂವಿಧಾನವನ್ನು ನೀಡಿದ್ದಾರೆ ಆದ್ದರಿಂದ ಗ್ರಾಮದ ಪೋಷಕರು ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರ ಜೊತೆಯಲ್ಲಿ ಶಾಲೆಗೆ ಕಡ್ಡಾಯವಾಗಿ ಕಳಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇನ್ನೂ ಇದೆ ವೇಳೆ ಶಾಲೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈಗಲು ಬೋರಯ್ಯ, ಸದಸ್ಯ ಪಿ ಎಂ ಮುತ್ತಯ್ಯ, ಶಾಲೆಯ ಮುಖ್ಯ ಶಿಕ್ಷಕ ಬಿ. ವಿಶ್ವನಾಥ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮುಸ್ಟೂರು, ಪಿಡಿಒ ರಾಜಣ್ಣ, ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಎಂ ಬಿ . ಸಣ್ಣ ಬೋರಯ್ಯ, ಪ್ರೌಢಶಾಲೆಯ ಶಿಕ್ಷಕರಾದ ಎನ್ ತಿಪ್ಪೇಸ್ವಾಮಿ, ಆರ್ ಟಿ.ಸತೀಶ್ ಬಾಬು , ಆರ್ ಅಬ್ದುಲ್ ಮುಜೀಬ್, ಪ್ರ.ದ . ಸಹಾಯಕ ಎ ಎನ್ ಹರೀಶ್, ಶಿಕ್ಷಕಿ ಎನ್ ಜ್ಯೋತಿ, ಎ. ಜೆ. ಸಂಜೀವಿನಿ, ಕೆ ಪಿ ಜಯಚಿತ್ರ, ಅತಿಥಿ ಶಿಕ್ಷಕಿ ಅನಿತಮ್ಮ, ಕೆ ಬಿ ಬೋರಮ್ಮ, ಡಿ ಗ್ರೂಪ್ ನಿಂಗರಾಜ್. ಸೇರಿದಂತೆ ಅಂಗನವಾಡಿ ಶಿಕ್ಷಕಿರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಮಸ್ತ ಊರಿನ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!