ಚಳ್ಳಕೆರೆ : ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 75ನೇ ಗಣರಾಜ್ಯೋತ್ಸವಕ್ಕೆ ಸಲ್ಲಬೇಕು ಎಂದು ಹೊಂಗಿರಣ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರೆವೆರಿಸಿ ಮಾತನಾಡಿದ ಅವರು. ಮಾಹನೀಯರ ತ್ಯಾಗ ಬಲಿದಾನಗಳ ಇತಿಹಾಸ ನಾಡಿನ ಜನತೆ 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದ ಹಾದಿಯಲ್ಲಿ ನಾವು ನೀವು ಎಲ್ಲರು ಇದ್ದೆವೆ, ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಹಾದಿಯಲ್ಲಿ ನಡೆಯೋಣ ಎಂದರು.
ಇನ್ನೂ ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ಗುಪ್ತ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವಾತಂತ್ರö್ಯ, ಸಮಾನತೆ ಹಾಗು ಭ್ರಾತೃತ್ವದ ಮೌಲ್ಯಗಳನ್ನು ಒತ್ತಿ ಹೇಳುವ ದಿನವನ್ನಾಗಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ, ಸ್ವಾತಂತ್ರö್ಯ ಚಳುವಳಿಯ ಕಾಲದಲ್ಲಿಯೇ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹೊಂದಿದ್ದ ಭಾರತ ಪರಕೀಯರ ದಾಸ್ಯದಿಂದ ಮುಕ್ತರಾಗಲು ನಾವು ಪಡೆದ ಸ್ವಾತಂತ್ರö್ಯ ಅಸಂಖ್ಯ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಫಲ. ಇದನ್ನು ಸದಾ ಸ್ಮರಿಸುವ ಜೊತೆಗೆ ದೇಶದ ಏಳಿಗೆಗಾಗಿ ಅವರು ಇಟ್ಟ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಇನ್ನಷ್ಟು ಅಭಿವೃದ್ಧಿ ಹೊಂದಿದ ಭಾರತವನ್ನಾಗಿಸಲು ನಾವೆಲ್ಲರು ಶ್ರಮಿಸುವ ಪಣ ತೊಡುವ ಸುಸಂದರ್ಭ ಇದಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ಶಿವುಪ್ರಸಾದ್, ಮಧುಸುಧನ್, ಕಾರ್ಯದರ್ಶಿಗಳಾದ ದಯಾನಂದ ಪ್ರಹ್ಲಾದ್, ಮುಖ್ಯ ಶಿಕ್ಷಕರಾದ ಪ್ರಸಾದ್, ಶೈಲಜಾ, ಶೋಭಾ, ಸಿದ್ದೇಶ್, ಸಹ ಶಿಕ್ಷಕರು ಹಾಗೂ ಮಕ್ಕಳು ಇದ್ದರು.

About The Author

Namma Challakere Local News
error: Content is protected !!