ನಾಯಕನಹಟ್ಟಿಜ.೨೪. ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಶ್ರೀ ವಿಜಯ ಕನ್ನಡ ಶಾಲೆ, ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ಮತದಾನ ಕುರಿತು ಜಾಗೃತಿ ಜಾಥ ನಡೆಸಿದ್ದಾರೆ.
ಈ ವೇಳೆ ನಾಯಕನಹಟ್ಟಿ ಸಿಆರ್ ಪಿ ಈಶ್ವರಪ್ಪ ಮತನಾಡಿ ಮತದಾನದಿಂದ ವಂಚಿತರಾಗದೇ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಕಟ್ಟಿಗೊಳಿಸಬೇಕು ಎಂದು ಹೇಳಿದರು.
ಮತದಾನದಿಂದ ಯಾರು ವಂಚಿತರಾಗಬಾರದು, ೧೮ ವರ್ಷಗಳು ತುಂಬಿದರು ಮತಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊAಡಿಲ್ಲವೆAದರೆ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಾದ ಶೈಲಶ್ರೀ, ಸಿ. ವಿಜಯಲಕ್ಷಿö್ಮÃ, ಮುಖ್ಯಶಿಕ್ಷಕರಾದ ಮಹಾಂತನಾಯ್ಕ್, ಈಶ್ವರಪ್ಪ, ಸಹಶಿಕ್ಷಕರಾದ ಹೆಚ್.ಎಂ. ನವೀನ್, ಜಗದೀಶ್, ಮಂಜುನಾಥ, ಶಶಿಧರ್, ಏಕಾಂತ್, ಶೈಲಾಜ, ಲಕ್ಷ್ಮೀದೇವಿ, ಉಷಾ, ಗ್ರಾಮಸ್ಥರಾದ ಆಟೋ ತಿಪ್ಪೇಸ್ವಾಮಿ, ತೇಜು, ಚೆನ್ನಮ್ಮ, ರಮೇಶ್ ಹಾಗು ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.