ಚಳ್ಳಕೆರೆ : ಚಳ್ಳಕೆರೆ ನಗರಸಭೆ ಕಛೇರಿಯಲ್ಲಿ ಪೌರಾಯುಕ್ತ ಸಿ.ಚಂದ್ರಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಚೇರಿ ಸಿಬ್ಬಂದಿಗೆ ಪ್ರತಿಜ್ಞೆ ವಿಧಿಯನ್ನು ಭೋಧಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.
ಇನ್ನೂ ಕಚೇರಿ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಅತಿ ಮುಖ್ಯವಾದ ಪಾತ್ರವಹಿಸುತ್ತದೆ ಆದ್ದರಿಂದ ಮತದಾನದಿಂದ ಯಾರು ಕೂಡ ವಂಚಿತರಾಗದಂತೆ ಮತದಾನದ ಅರಿವು ಮೂಡಿಸಬೇಕು ಇದರಿಂದ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಭದ್ರಬುನಾದಿಯಾದಂತ ಮತದಾನದ ಹಕ್ಕು ಪ್ರತಿಯೊಬ್ಬರು ಚಲಾಯಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ಕಚೇರಿ ಅಧೀಕ್ಷಕರಾದ ಲಿಂಗರಾಜ್ ಕಂದಾಯ ಅಧಿಕಾರಿಗಳು, ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು